ಸುಳ್ಯ:ಕೇರಳದ ಕಾಞಂಗಾಡ್ನಿಂದ ಗಡಿ ಪ್ರದೇಶವಾದ ಬಂದಡ್ಕ ಮೂಲಕ ಸುಳ್ಯಕ್ಕೆ ಕೇರಳ ರಸ್ತೆ ಸಾರಿಗೆ ಸಂಸ್ಥೆಯ ಬಸ್ ಆ.14ರಿಂದ ಸಂಚಾರ ಆರಂಭ ಮಾಡಲಿದೆ ಎಂದು ತಿಳಿದು ಬಂದಿದೆ. ಕಾಞಂಗಾಡ್ ಡಿಪೋದಿಂದ
ಪೆರಿಯ, ಮೂನಾಂಕಡವ್- ಕುಂಡಕುಯಿ- ಬಂದಡ್ಕ- ಕನ್ನಡಿತೋಡ್-ಕೋಲ್ಚಾರ್ ಮೂಲಕ ಸುಳ್ಯಕ್ಕೆ ಬಸ್ ಸೇವೆಯನ್ನು ಪ್ರಾರಂಭಿಸಲು ಕೇರಳ ಸರಕಾರ ಅನುಮತಿ ನೀಡಿದೆ.ಕಾಞಂಗಾಡ್ನಿಂದ ಸುಳ್ಯಕ್ಕೆ ಬಸ್ ಬೆಳಿಗ್ಗೆ 7ಕ್ಕೆ ಹೊರಟು 9.10 ಕ್ಕೆ ಸುಳ್ಯ ತಲುಪುತ್ತದೆ, ಸುಳ್ಯದಿಂದ 9.20ಕ್ಕೆ ಹೊರಟು11.30ಕ್ಕೆ ಕಾಞಂಗಾಡ್ ತಲುಪುತ್ತದೆ, ಕಾಂಞಂಗಾಡ್ ಮಧ್ಯಾಹ್ನ 12.10 ಹೊರಟು, 2.25ಕ್ಕೆ ಸುಳ್ಯ ತಲುಪುತ್ತದೆ, ಸುಳ್ಯ ದಿಂದ 2.35 ಹೊರಟು 4.50ಕ್ಕೆ ಕಾಞಂಗಾಡ್ ತಲುಪಲಿದೆ.
ಈ ರಸ್ತೆಯಲ್ಲಿ ಬಸ್ ಸೇವೆ ಆರಂಭಿಸಬೇಕು ಎಂಬುದು ದಶಕಗಳ ಬೇಡಿಕೆಯಾಗಿದೆ. ಬಸ್ಗೆ ವಿವಿಧ ಕಡೆಗಳಲ್ಲಿ ಸ್ವಾಗತ ನೀಡಲು ಸಿದ್ಧತೆ ನಡೆಸಲಾಗಿದೆ. ಸದ್ಯ ಸುಳ್ಯ-ಕಾಞಂಗಾಡ್ ಮಧ್ಯೆ 3 ಟ್ರಿಪ್ ಬಸ್ ಓಡಾಟ ನಡೆಸಲಿದೆ.





