ಸುಳ್ಯ: ಸುಳ್ಯದ ಬಹು ನಿರೀಕ್ಷಿತ ಕೇರಳದ ಕಾಞಂಗಾಡ್ ಹಾಗೂ ಕರ್ನಾಟಕದ ಕಾಣಿಯೂರು ಸಂಪರ್ಕಿಸುವ ಕಾಞಂಗಾಡ್-ಕಾಣಿಯೂರು ರೈಲ್ವೆ ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂದುಕಾಞಂಗಾಡ್- ಕಾಣಿಯೂರು ರೈಲ್ವೇ ನಿರ್ಮಾಣ ಕ್ರಿಯಾ ಸಮಿತಿ ಒತ್ತಾಯಿಸಿದೆ. ಯೋಜನೆ ಪುನರುಜ್ಜೀವನಗೊಳಿಸಬೇಕು ಎಂದು
ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಕ್ರಿಯಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಿ.ಬಿ.ಸುಧಾಕರ ರೈ ಅವರ ನೇತೃತ್ವದಲ್ಲಿ ಮನವಿ ಸಮರ್ಪಿಸಲಾಯಿತು. ಯೋಜನೆ ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರನ್ನು ಭೇಟಿ ಮಾಡಲಾಗುವುದು ಎಂದು ಸುಧಾಕರ ರೈ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಪ್ರಮುಖರಾದ ಎಸ್. ಎನ್. ಮನ್ಮಥ, ಮಹೇಶ್ ಕುಮಾರ್ ಮೇನಾಲ, ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮೋಹನ್ ಗೌಡ, ಉಪ ಪ್ರಾಂಶುಪಾಲ, ಪ್ರಕಾಶ್ ಮೂಡಿತ್ತಾಯ,ನಗರ ಪಂಚಾಯತ್ ಸದಸ್ಯರಾದ ಶಿಲ್ಪಾ ಸುದೇವ್, ಶಶಿಕಲಾ ನೀರಬಿದಿರೆ ಗುರುಸ್ವಾಮಿ
ಮತ್ತಿತರರು ಉಪಸ್ಥಿತರಿದ್ದರು