ಗುತ್ತಿಗಾರು: ರೂ. 10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟೀಕರಣಗೊಂಡ ಸುಳ್ಯ ತಾಲೂಕಿನ ಕಂದ್ರಪ್ಪಾಡಿ-ವಾಲ್ತಾಜೆ ಎಸ್.ಸಿ ಕಾಲೋನಿ ರಸ್ತೆಯನ್ನು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಎಸ್.ಅಂಗಾರ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಬಿ.ಜೆ.ಪಿ. ಉಪಾಧ್ಯಕ್ಷ ವೆಂಕಟ್ ವಳಲಂಬೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಹಾಗು ಕೇಂದ್ರ ರಬ್ಬರ್ ಮಂಡಳಿ ನಿರ್ದೇಶಕರಾದ ಮುಳಿಯ ಕೇಶವ ಭಟ್, ಗುತ್ತಿಗಾರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟ್ ದಂಬೆಕೋಡಿ, ಪ್ರಮುಖರಾದ ಕಾಳಿಕಾ ಪ್ರಸಾದ್, ಯಶೋಧ, ಕೃಷ್ಣಯ್ಯ ಮೂಲೆತೋಟ, ಭವಾನಿಶಂಕರ್ ಮುಂಡೋಡಿ, ರಮೇಶ್ ಪಡ್ಪು, ಕಿಶೋರ್ ಅಂಬೆಕಲ್ಲು,ದಯಾನಂದ ಮುತ್ಲಾಜೆ, ಮಹಾಬಲ ಮುಂಡೋಡಿ ಮತ್ತಿತರರು ಉಪಸ್ಥಿತರಿದ್ದರು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಅಥವಾ 9008417480 ಗೆ ವಾಟ್ಸಪ್ ಮಾಡಿರಿ.