ಸುಳ್ಯ:ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ಕಂದ್ರಪ್ಪಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವದಲ್ಲಿ ಸಾಂಸ್ಕೃತಿಕ ಸಂಭ್ರಮ ವಿಜ್ರಂಭಿಸಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಕರಣ್ ಮ್ಯೂಸಿಕಲ್ಸ್ ಅವರಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು. ಅಂಗನವಾಡಿ ಹಾಗೂ ಶಾಲಾ ವಿದ್ಯಾರ್ಥಿಗಳಿಂದ ವಿವಿಧ
ವಿನೋದಾವಳಿಗಳು, ಹಳೆ ವಿದ್ಯಾರ್ಥಿ, ಯುವಕ ಯುವತಿ ಮಂಡಲದವರಿಂದ ಸಾಂಸ್ಕೃತಿಕ ವೈಭವ ನಡೆಯಿತು. ರಾತ್ರಿ ಡಾ.ದೇವದಾಸ್ ಕಾಪಿಕಾಡ್ ಅವರ ಚಾ ಪರ್ಕ ಕಲಾವಿದರು ಅಭಿನಯಿಸುವ ತುಳು ಹಾಸ್ಯಮಯ ನಾಟಕ ಪುದರ್ ದೀದಾಂಡ್ ಪ್ರದರ್ಶನಗೊಂಡು ನೆರೆದ ಪ್ರೇಕ್ಷಕರನ್ನು ರಂಜಿಸಿತು.
ಶತಮಾನೋತ್ಸವ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ, ಬಾಲಕೃಷ್ಣ ಮಾಸ್ತರ್ ಹಿರಿಯಡ್ಕ, ಶತಮಾನೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಲಿಂಗಪ್ಪ ಗೌಡ ಚಿತ್ತಡ್ಕ,ಗೌರವಾಧ್ಯಕ್ಷ ಕುಶಾಲಪ್ಪ ಮಾಸ್ತರ್ ರುದ್ರಚಾಮುಂಡಿ ನಿಲಯ, ಕೋಶಾಧಿಕಾರಿ ಹಾಗೂ ಶಾಲಾ ಮುಖ್ಯೋಪಾಧ್ಯಾಯರಾದ ವಾಣಿ ಕೆ.ಎಸ್, ಶತಮಾನೋತ್ಸವ ಸಮಿತಿ ಸಂಚಾಲಕ ವಿಜೇಶ್ ಹಿರಿಯಡ್ಕ,
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಕೇಶ್ ರಾಜ್ ಹಿರಿಯಡ್ಕ, ಪ್ರಧಾನ ಕಾರ್ಯದರ್ಶಿ ಪ್ರೀತಂ ಮುಂಡೋಡಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಚಂದ್ರಶೇಖರ ಮತ್ತಿತರರು ಉಪಸ್ಥಿತರಿದ್ದರು.