ಸುಳ್ಯ:ಮಂಗಳೂರು ವಿಶ್ವ ವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪಡೆದ ಡಾ. ಕಣಚೂರು ಯು. ಕೆ. ಮೋನು ಹಾಜಿ ಅವರನ್ನು ಭೆಟಿಯಾದ ಮುಸ್ಲಿಂ ಮುಖಂಡರು ಅವರನ್ನು ಸನ್ಮಾನಿಸಿ ಗೌರವಿಸಿದರು. ಕೆಪಿಸಿಸಿ ಮಾಧ್ಯಮ ವಕ್ತಾರ ಹಾಗೂ ತೆಕ್ಕಿಲ್ ಪ್ರತಿಷ್ಟಾನಾದ ಸ್ಥಾಪಕ ಅಧ್ಯಕ್ಷರಾದ ಟಿ ಎಂ ಶಾಹಿದ್ ತೆಕ್ಕಿಲ್, ಕಾಂಗ್ರೆಸ್ ಅಲ್ಪ ಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ. ಮುಸ್ತಫ, ದಕ್ಷಿಣ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ
ಕಾಂಗ್ರೆಸ್ ಘಟಕದ ಅಧ್ಯಕ್ಷ ಶಾಹುಲ್ ಹಮೀದ್ ಕೆ. ಕೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಎಂ. ಎಸ್. ಮಹಮ್ಮದ್ ಅಭಿನಂದಿಸಿ ಮಾತನಾಡಿದರು. ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷರಾದ ಎಸ್ ಶಂಶುದ್ದಿನ್, ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ,ಕೆಪೆಕ್ ಮಾಜಿ ನಿರ್ದೇಶಕ ಪಿ. ಎ. ಮಹಮ್ಮದ್, ನೂರುದ್ದಿನ್ ಸಾಲ್ಮರ, ಅಖಿಲ ಭಾರತ ಬ್ಯಾರಿ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಖಾಲಿದ್ ಉಜಿರೆ ,ಚಾರ್ಮಾಡಿ ಹಸನಬ್ಬ, ಡಿ ಐ ಅಬೂಬಕ್ಕರ್ ಕೈರಂಗಳ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಸಿದ್ದಿಕ್ ಕೊಕ್ಕೋ, ಸಮದ್ ಸೋಂಪಾಡಿ, ಹೈದರ್ ಪರ್ತಿಪಾಡಿ, ನಝಿರ್, ಕಣಚೂರ್ ಸಮೂಹ ಸಂಸ್ಥೆಯ ಕಟ್ಟಡದ ಇಂಜಿನಿಯರ್ ಶಮೀರ್ ಗೂನಡ್ಕ, ಅಬ್ದುಲ್ ಬಶೀರ್ ಸ್ವಪ್ನ ಸುಳ್ಯ, ಅಭಿನಂದಿಸಿಸರು.