ಸುಳ್ಯ: ಶ್ರೀ ಕಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕಾರಾಚಾರ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರು ನ.18ರಂದು ಬೆಳಗ್ಗೆ ಸುಳ್ಯ ಅರಂಬೂರಿನ ಭಾರದ್ವಾಜಾಶ್ರಮಕ್ಕೆ ಆಗಮಿಸಲಿದ್ದಾರೆ.ಬೆಳಗ್ಗೆ 11 ರಿಂದ ಸೂರ್ಯಾಸ್ತಮಾನದ ತನಕ
ಕಾರ್ತಿಕ ಸೋಮವಾರದ ಪರ್ವಕಾಲದಲ್ಲಿ ಸಪರಿವಾರ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಲಿದೆ. ಸಂಜೆ 7ರಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡುವ ಶ್ರೀಗಳುಆಶೀರ್ವಚನ ನೀಡುವರು. ರಾತ್ರಿ ಭಾರದ್ವಾಜಾಶ್ರಮದಲ್ಲಿ
ಮೊಕ್ಕಾಂ ಇರಲಿದ್ದಾರೆ.
ನ.19ರಂದು ಬೆಳಗ್ಗೆ 9ರಿಂದ ಶ್ರೀಗಳಿಂದ ಸಪರಿವಾರ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಲಿದೆ ಎಂದು ಸುಳ್ಯದ ಅರಂಬೂರಿನ ಭಾರದ್ವಾಜಾಶ್ರಮದ ಶ್ರೀ ಕಂಚಿ ಕಾಮಕೋಟಿ ವೇದವಿದ್ಯಾಲಯ ಬಳಗದ ಪ್ರಕಟಣೆ ತಿಳಿಸಿದೆ.