ಸುಳ್ಯ:ಶ್ರೀ ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕಾರಾಚಾರ್ಯ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮೀಜಿ ಅವರು ನ.18ರಂದು ಬೆಳಗ್ಗೆ ಸುಳ್ಯ ಅರಂಬೂರಿನ ಭಾರದ್ವಾಜಾಶ್ರಮಕ್ಕೆ ಆಗಮಿಸಿದರು.ಕಾಂಚಿ ಕಾಮಕೋಟಿ ವೇದ ವಿದ್ಯಾಲಯದ ಬಳಗದವರು ಸ್ವಾಗತಿಸಿದರು. ಬಳಿಕ ಮಹಾಸ್ವಾಮೀಜಿಯವರಿಂದ ಆಶೀರ್ವಚನ ನೆರವೇರಿತು.
ಆಶ್ರಮದ ವತಿಯಿಂದ
ಪಾದಪೂಜೆಯನ್ನು ನೆರವೇರಿಸಲಾಯಿತು. ಆಶ್ರಮದಲ್ಲಿ ಹಿರಿಯಾರಾದ ಗಿರೀಶ್ ಭಾರದ್ವಾಜ್ ಹಾಗೂ ಭಾರದ್ವಾಜ ಸಹೋದರರು ಸ್ವಾಮೀಜಿಯವರನ್ನು ಸ್ವಾಗತಿಸಿದರು. ಬಳಿಕ ಸ್ವಾಮೀಜಿಯವರು ಸೂರ್ಯಾಸ್ತಮಾನದ ತನಕ ಕಾರ್ತಿಕ ಸೋಮವಾರದ ಪರ್ವಕಾಲದಲ್ಲಿ ಸಪರಿವಾರ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಿಸಲಿದ್ದಾರೆ.
ಸಂಜೆ 7ರಿಂದ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ಶ್ರೀಗಳು ಆಶೀರ್ವಚನ ನೀಡಲಿದ್ದಾರೆ. ರಾತ್ರಿ ಭಾರದ್ವಾಜಾಶ್ರಮದಲ್ಲಿ
ಮೊಕ್ಕಾಂ ಇರಲಿದ್ದಾರೆ.