ಸುಳ್ಯ:ಪೆರುವಾಜೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿ ದಾಮೋದರ ಕಣಜಾಲು ಸೋಮವಾರ ಅಧಿಕಾರ ವಹಿಸಿಕೊಂಡರು. ಕಾಲೇಜಿನಲ್ಲಿ ಅವರಿಗೆ ಸ್ವಾಗತ ನೀಡಲಾಯಿತು. ಕಾಲೇಜಿನ ಪ್ರಾಂಶುಪಾಲರಾಗಿದ್ದ ರಾಘವ ಗೌಡ ಅವರಿಗೆ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಬೀಳ್ಕೊಡಲಾಯಿತು.
ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಪದ್ಮನಾಭ ಪೆರುವಾಜೆ, ಸದಸ್ಯರಾದ ಶಿವಪ್ರಸಾದ್,ಹಳೆವಿದ್ಯಾರ್ಥಿ ಸಂಘದ ಸದಸ್ಯ ಹರ್ಷಿತ್ ಉಪಸ್ಥಿತರಿದ್ದರು.