ಕಲ್ಲಪಳ್ಳಿ:ಗಡಿ ಪ್ರದೇಶವಾದ ಕಮ್ಮಾಡಿ ಪರಿಶಿಷ್ಟ ಕಾಲೋನಿಯಲ್ಲಿ ನಿವೇಶನದ ಹಕ್ಕುಪತ್ರ ಪಡೆದ 10 ಕುಟುಂಬಗಳಿಗೆ ಮನೆ ನಿರ್ಮಾಣ ಮಾಡಲು ಅನುದಾನ ಮಂಜೂರಾಗಿದೆ. ಪನತ್ತಡಿ ಗ್ರಾಮ ಪಂಚಾಯತ್ ನ ಕಲ್ಲಪ್ಪಳ್ಳಿಯ ಕಮ್ಮಾಡಿಯ 10 ಕುಟುಂಬಗಳು ವಾಸವಿದ್ದ ಸ್ಥಳ ಅತ್ಯಂತ ಸೂಕ್ಷ್ಮ ಪ್ರದೇಶವಾಗಿರುವುದರಿಂದ ಮಳೆಗಾಲದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸುವ ಸಾಧ್ಯತೆ ಇದ್ದು ಇವರನ್ನು ಪ್ರತೀ ವರ್ಷ ಕಾಳಜಿ ಕೇಂದ್ರಗಳಿಗೆ
ಸ್ಥಳಾಂತರಿಸಲಾಗುತ್ತಿತ್ತು.ಈ ಕುಟುಂಬಗಳಿಗೆ ಪನತ್ತಡಿ ಪಂಚಾಯತ್, ಜನಪ್ರತಿನಿಧಿಗಳು ಹಾಗೂ ಶಾಸಕ ಇ.ಚಂದ್ರಶೇಖರನ್ ಅವರ ಪ್ರಯತ್ನದಿಂದ ಕಲ್ಲಪ್ಪಳ್ಳಿಯಲ್ಲಿ ತಲಾ 6 ಸೆಂಟ್ಸ್ ಜಮೀನು ಮಂಜೂರು ಮಾಡಿ ಆ.20 ರಂದು ಹಕ್ಕು ಪತ್ರ ನೀಡಲಾಗಿತ್ತು. ಇದೀಗ ಈ 10 ಕುಟುಂಬಗಳಿಗೆ ಪರಿಶಿಷ್ಟ ಪಂಗಡ ಇಲಾಖೆಯಿಂದ ಮನೆ ನಿರ್ಮಾಣಕ್ಕೆ 6 ಲಕ್ಷ ರೂಪಾಯಿಗಳು ಮಂಜೂರಾಗಿದೆ. ಪರಿಶಿಷ್ಟ ಪಂಗಡ ಇಲಾಖೆಯು ಎರಡು ವಾರಗಳಲ್ಲಿ ಪ್ರಕ್ರಿಯೆ ಮುಗಿಸಿ ಈ ಕುಟುಂಬಗಳಿಗೆ ಮೊದಲ ಕಂತಿನ ತಲಾ 90 ಸಾವಿರ ರೂಪಾಯಿ ನೀಡಲಾಗುವುದು, ಕಮ್ಮಾಡಿ ಕಾಲೋನಿಯಲ್ಲಿರುವ ಡಿ.ಬಿ.ಸುಂದರನ್, ಕೆ.ಬಿ.ರವಿ, ಇಂದಿರಾ, ಸರಸ್ವತಿ ಕೆ.ಸಿ., ಕೆ.ಸಿ.ಚೆಟ್ಟಿ, ಚಿಲ್ಲಿ, ಚೆಂಬಾ, ಕೆ.ಸಿ.ರಮೇಶ, ಕೆ.ಎನ್.ರಾಣಿ ಅವರ ಕುಟುಂಬಗಳಿಗೆ ಮನೆ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದೆ ಎಂದು ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಹಾಗೂ ಗ್ರಾಮ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ತಿಳಿಸಿದ್ದಾರೆ.