ಕಮ್ಮಾಡಿ: ಗಡಿ ಪ್ರದೇಶ ಪನತ್ತಡಿ ಗ್ರಾಮ ಪಂಚಾಯತ್ ಕಲ್ಲಪ್ಪಳ್ಳಿ 6ನೇ ವಾರ್ಡ್ ವ್ಯಾಪ್ತಿಗೆ ಒಳಪಟ್ಟ ಕಮ್ಮಾಡಿ ಪ್ರದೇಶದಲ್ಲಿ ಗುಡ್ಡ ಕುಸಿತದ ಭೀತಿಯಿಂದ ಮನೆಯವರನ್ನು ಸ್ಥಳಾಂತರ ಮಾಡಿ ತೆರೆಯಲಾದತ ಕಮ್ಮಾಡಿಯ ಪತ್ತುಕುಡಿ ಹಾಗೂ
ಮಾರಟಿಚೇರಿ ಕಾಳಜಿ ಕೇಂದ್ರಕ್ಕೆ ಬಿಜೆಪಿ ಮುಖಂಡರು ಭೇಟಿ ನೀಡಿದರು. ಬಿಜೆಪಿ ಕಲ್ಲಪ್ಪಳ್ಳಿ ಬೂತ್ ಸಮಿತಿಯ ನೇತೃತ್ವದಲ್ಲಿ ಆಹಾರ ಕಿಟ್ಗಳನ್ನು ವಿತರಿಸಲಾಯಿತು.ಕುಟುಂಬ ಸದಸ್ಯರೊಂದಿಗೆ ಮಾತುಕತೆ ನಡೆಸಿದರು.ಈ ಸಂದರ್ಭದಲ್ಲಿ ಪನತ್ತಡಿ ಪಂಚಾಯತ್ ಸದಸ್ಯ, ಬಿಜೆಪಿ ಮಂಡಲ ಕಾರ್ಯದರ್ಶಿ ವೇಣುಗೋಪಾಲ್ ಕೆ ಕೆ, ಬಿಜೆಪಿ ಮಂಡಲ ಸದಸ್ಯರಾದ ಜಯರಾಮ್ ಮಾಸ್ಟರ್, ನಂದಕುಮಾರ್ ಬಾಟೋಳಿ, ಬಿಜೆಪಿ ಪಂಚಾಯತ್ ಪ್ರಧಾನ ಕಾರ್ಯದರ್ಶಿ ಪ್ರದೀಶ್, ಕಾರ್ಯದರ್ಶಿ ಜಯಪ್ರಕಾಶ್ ಪೆರುಮುಂಡ, ಬಿಜೆಪಿ ಕಲ್ಲಪ್ಪಳ್ಳಿ ಬೂತ್ ಅಧ್ಯಕ್ಷ ರಾಜಶೇಖರ ದೊಡ್ಡಮನೆ, ಕಾರ್ಯದರ್ಶಿ ರಾಜೇಶ್ ಪೆರುಮುಂಡ, ನಿರ್ಮಲನ್ ಕಮ್ಮಾಡಿ, ಶಂಕರನ್ ಕಮ್ಮಾಡಿ, ಮಹೇಶ್ ಪೆರುಮುಂಡ, ಪವನ್ ಮೂಲೆಹಿತ್ಲು ಮುಂತಾದವರು ಇದ್ದರು.