ಸುಳ್ಯ:ಮೊದಲ ಬಾರಿಗೆ ರಾಜ್ಯದ ರಾಜಧಾನಿಯಲ್ಲಿ ‘ಬೆಂಗಳೂರು ಕಂಬಳ-ನಮ್ಮ ಕಂಬಳ’ ನ.25,26ರಂದು ನಡೆಯಲಿದ್ದು,ನೂರಾರು ಪ್ರಶಸ್ತಿಯನ್ನು ಪಡೆದಿರುವ ಸುಳ್ಯದ ಕಾಂತಮಂಗಲದ ಜಗದೀಶ್ ರಾವ್ ಅವರ ಕೋಣಗಳನ್ನು ಬೆಂಗಳೂರು ಕಂಬಳಕ್ಕೆ ಕರೆದೊಯ್ಯಲಾಗಿದೆ. ಸುಳ್ಯದ ರಥಬೀದಿಯಲ್ಲಿ ಕಂಬಳ ಉಳಿಸಿ ಹೋರಾಟ ಸಮಿತಿ ಹಾಗೂ ಶ್ರೀ ಶಾರದಾಂಬಾ ಸೇವಾ ಸಮಿತಿಯ ಪದಾಧಿಕಾರಿಗಳು ಕಂಬಳದ

ಕೋಣಗಳನ್ನು ಗೌರವಪೂರ್ವಕವಾಗಿ ಬೀಳ್ಕೊಡಲಾಯಿತು. ಕಂಬಳ ಉಳಿಸಿ ಹೋರಾಟ ಸಮಿತಿಯ ಸಂಚಾಲಕ
ಗೋಕುಲ್ದಾಸ್ ಕೆ ತೆಂಗಿನಕಾಯಿ ಒಡೆದು ವಾಹನಕ್ಕೆ ಚಾಲನೆ ನೀಡಿದರು.ತಂಡಕ್ಕೆ ಶಾಲು ಹೊದಿಸಿ ಶುಭ ಹಾರೈಸಿದರು. ಯಾದೋಜಿ ರಾವ್, ಸಂದೀಪ್ ರಾವ್, ಪ್ರದೀಪ್ ರಾವ್ ಅವರನ್ನು ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪ್ರಮುಖರಾದ ಎಂ.ಬಿ.ಸದಾಶಿವ, ಭವಾನಿಶಂಕರ ಕಲ್ಮಡ್ಕ, ರಾಜು ಪಂಡಿತ್, ಮಂಜುನಾಥ ಬಳ್ಳಾರಿ, ಚೇತನ್ ಕಜೆಗದ್ದೆ,ದೀಪಕ್ ಪಿ.ಎಸ್,ಸತೀಶ್ ಎಂ.ಕೆ, ಶಾಫಿ ಕುತ್ತಮೊಟ್ಟೆ, ಶಶಿಧರ ಎಂ.ಜೆ, ದಿನೇಶ್ ಸರಸ್ವತಿ ಮಹಲ್, ಮಧುಸೂದನ ಬೂಡು, ಸುಮಂತ್ ಪೈಚಾರ್, ರಜಾಕ್, ಜಬ್ಬಾರ್, ಹರಿಶ್ಚಂದ್ರ ಪಂಡಿತ್, ಸುರೇಶ್ ಪಂಡಿತ್, ಪದ್ಮನಾಭ ಆರ್ಭಡ್ಕ, ಗಣೇಶ್ ನಾಗಪಟ್ಟಣ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.









