ಕಲ್ಲುಗುಂಡಿ:ಎಸ್ಕೆಎಸ್ಎಸ್ಎಫ್ ಕಲ್ಲುಗುಂಡಿ ಶಾಖೆಯ ವತಿಯಿಂದ ಕಲ್ಲುಗುಂಡಿ ಪೇಟೆ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮುಖ್ಯ ಅತಿಥಿಗಳಾಗಿ
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷ ಟಿ. ಎಂ.ಶಹಿದ್ ತೆಕ್ಕಿಲ್, ಗ್ರಾಮ ಪಂಚಾಯತ್ ಉಪಾಧ್ಯಕ್ಷ ಎಸ್. ಕೆ ಹನೀಫ್, ಮಾಜಿ ಅಧ್ಯಕ್ಷ ಜಿ ಕೆ. ಹಮೀದ್ ಗೂನಡ್ಕ, ಜಗದೀಶ್ ರೈ, ವಿಮಲಾ ಪ್ರಸಾದ್, ಕೊಡಗು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮೊಯ್ದೀನ್ ಕುಂಞಿ,ಸಂಘಟನೆ ಮುಖ್ಯಸ್ಥರಾದ ತಾಜ್ ಮಹಮ್ಮದ್, ತಾಜುದ್ದೀನ್ ಟರ್ಲಿ, ಅಬ್ದುಲ್ ಖಾದರ್ ಮೊಟ್ಟಂಗಾರ್, ತಾಜ್ ಅರಂತೋಡು. ಖಲೀಲ್ ಪೆರಡ್ಲ, ಕಾನಕೋಡ್ ಮಹಮದ್,ಆರೀಫ್ ಫೈಝಿ, ಸಂಪಾಜೆ ಜುಮ್ಮಾ ಮಸೀದಿ ಖತೀಬ್ ಲುಕ್ಮನೂಲ್ ಹಕೀಮ್ ಫೈಝಿ, ಎಸ್ಕೆಎಸ್. ಎಸ್ಎಫ್ ಕಾರ್ಯಕರ್ತರು ಉಪಸ್ಥಿತರಿದ್ದರು.





