ಕಲ್ಲುಗುಂಡಿ: ಕಲ್ಲುಗುಂಡಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ಮಹಾವಿಷ್ಣುಮೂರ್ತಿ ದೈವದ ಒತ್ತೆಕೋಲವು ಮಾ.28 ಮತ್ತು 29ರಂದು ಜರುಗಿತು. ಅತ್ಯಂತ ಎತ್ತರವಾದ ಮೇಲೇರಿ ಮತ್ತು ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ ಇಲ್ಲಿನ

ವಿಶೇಷತೆ ಮಾ.28ರಂದು ರಾತ್ರಿ ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನದಿಂದ ಭಂಡಾರವನ್ನು ಒತ್ತೆಕೋಲ ಗದ್ದೆಗೆ ತಂದು, ಬಳಿಕ ಮೇಲೇರಿಗೆ ಅಗ್ನಿಸ್ಪರ್ಶ ಮಾಡಲಾಯಿತು .ರಾತ್ರಿ ಶ್ರೀ ವಿಷ್ಣುಮೂರ್ತಿ ದೈವದ ಕುಳ್ಳಾಟ ನಡೆಯಿತು.
ಮಾ.29ರಂದು ಬೆಳಿಗ್ಗೆ ಶ್ರೀ ಮಹಾವಿಷ್ಣುಮೂರ್ತಿ ದೈವದ ಅಗ್ನಿಪ್ರವೇಶ, ಮಾರಿಕಳ ಪ್ರವೇಶ, ಬಳಿಕ ಪ್ರಸಾದ ವಿತರಣೆ, ನಡೆಯಿತು.
ಸಾವಿರಾರು ಮಂದಿ ಭಾಗವಹಿಸಿದ್ದರು.