ಸಂಪಾಜೆ: ಸಂಪಾಜೆ ಗ್ರಾಮ ಪಂಚಾಯತ್ನ ಕಲ್ಲುಗುಂಡಿ ಪೇಟೆಯಲ್ಲಿ 3 ಕೊಠಡಿ ಗಳ ಹೊಸ ಮಾರುಕಟ್ಟೆ ಸಂಕಿರ್ಣದ ಲೋಕಾರ್ಪಣಾ ಕಾರ್ಯಕ್ರಮ ಜೂ.6 ರಂದು ನಡೆಯಿತು. ನೂತನ ಮಾರುಕಟ್ಟೆ ಸಂಕಿರ್ಣವನ್ನು ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯರು ಹಾಗೂ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ್ ಕೊಯಿಂಗಾಜೆ ತೆಂಗಿನಕಾಯಿ ಒಡೆಯುವ ಉದ್ಘಾಟಿಸಿದರು. ಕೊಠಡಿ 1ನ್ನು
ತೆಕ್ಕಿಲ್ ಪ್ರತಿಷ್ಠಾನದ ಅಧ್ಯಕ್ಷರಾದ ಟಿ. ಎಂ. ಶಾಹಿದ್ ತೆಕ್ಕಿಲ್ ಉದ್ಘಾಟನೆ ಮಾಡಿದರು. 2ನೇ ಕೊಠಡಿಯನ್ನು ಪದ್ಮಯ್ಯ ಗೌಡ ಹಾಗೂ ಜಗದೀಶ್ ರೈ ಉದ್ಘಾಟಿಸಿದರು.3 ನೇ ಕೊಠಡಿಯನ್ನು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜಾ ಹಾಗೂ ಸುಂದರಿ ಮುಂಡಡ್ಕ ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷ ಜಿ. ಕೆ. ಹಮೀದ್ ಗೂನಡ್ಕ ವಹಿಸಿದರು. ಕಾರ್ಯಕ್ರಮದಲ್ಲಿ ಉಪಾಧ್ಯಕ್ಷೆ ಲಿಸ್ಸಿ ಮೊನಾಲಿಸಾ, ಸದಸ್ಯರಾದ ಎಸ್. ಕೆ. ಹನೀಫ್, ಶೌವಾದ್ ಗೂನಡ್ಕ, ವಿಜಯಕುಮಾರ್ ಆಲಡ್ಕ, ವಿಮಲಾ ಪ್ರಸಾದ್,ರಜನಿ ಶರತ್, ಸುಶೀಲಾ, ಪ್ರಶಾಂತ್ ವಿ. ವಿ ಅಬೂಬಕ್ಕರ್ ಜನತಾ, ಕಾರ್ಮಿಕ ಮುಖಂಡ ರಾಜು ನೆಲ್ಲಿಕುಮೇರಿ,ಪಂಚಾಯತ್ ಕಾರ್ಯದರ್ಶಿ ಪದ್ಮಾವತಿ, ಸಿಬ್ಬಂದಿ ಗಳಾದ ಭರತ್, ಹರ್ಷಿತ್, ಪ್ರೀತಮ್, ಮೊದಲದವರು ಉಪಸ್ಥಿತರಿದ್ದರು