ಸುಳ್ಯ:ಸುಳ್ಯ-ಕಲ್ಲಪ್ಪಳ್ಳಿ- ಪಾಣತ್ತೂರು ಅಂತಾರಾಜ್ಯ ರಸ್ತೆಯಲ್ಲಿ ಗಡಿ ಪ್ರದೇಶ ಬಾಟೋಳಿ ಎಂಬಲ್ಲಿ ಮತ್ತೆ ಗುಡ್ಡ ಕುಸಿದು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿದೆ. ಭಾರೀ ಮಳೆಗೆ ಗುಡ್ಡ ಕುಸಿತ ಉಂಟಾಗಿದ್ದು ಮಣ್ಣು, ಕಲ್ಲು ಕುಸಿದು ರಸ್ತೆಗೆ ಬಿದ್ದಿದೆ. ಇದರಿಂದ ವಾಹನ ಸಂಚಾರಕ್ಕೆ ತಡೆ ಉಂಟಾಗಿದೆ. ಜು.19 ರಂದು ಹಗಲು

ಭಾರೀ ಪ್ರಮಾಣದಲ್ಕಿ ಕುಸಿದು ಬಿದ್ದಿದ್ದ ಮಣ್ಣು ತೆರವು ಕಾರ್ಯಾಚರಣೆ ಪೂರ್ತಿಗೊಳಿಸಿ ನಿನ್ನೆ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿತ್ತು. ಇದೀಗ ಮತ್ತೆ ಅದೇ ಸ್ಥಳದಲ್ಲಿ ಮಣ್ಣು ಕುಸಿತ ಉಂಟಾಗಿದೆ. ಜು.19 ರಂದು ಭಾರಿ ಪ್ರಮಾಣದಲ್ಲಿ ಮಣ್ಣು, ಮರ ಸಮೇತ ಗುಡ್ಡಜರಿದು ರಸ್ತೆ ಪೂರ್ತಿ ಬಂದ್ ಆಗಿತ್ತು. ಇದರಿಂದ ವಾಹನ ಸಂಚಾರಕ್ಕೆ ತಡೆ ಉಂಟಾಗಿತ್ತು ಮತ್ತು ನಡೆದು ಹೋಗಲು ಸಾಧ್ಯವಿಲ್ಲದ ರೀತಿಯಲ್ಲಿ ರಸ್ತೆ ಮುಚ್ಚಿ ಹೋಗಿತ್ತು. ಜೆಸಿಬಿ ಟಿಪ್ಪರ್ ಬಳಸಿ ಮಣ್ಣು, ಕಲ್ಲು, ಮರ ತೆರವು ಕಾರ್ಯ ನಡೆಸಲಾಗಿತ್ತು. ಇದೀಗ ಗುಡ್ಡ ಇನ್ನಷ್ಟು ಕುಸಿಯುವ ಭೀತಿ ಉಂಟಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.