ಸುಳ್ಯ: ದೀಪಗಳ ಹಬ್ಬ ದೀಪಾವಳಿಯ ಸಂಭ್ರಮವನ್ನು ಹೆಚ್ಚಿಸಲು ವೈವಿಧ್ಯಮಯ ಪಟಾಕಿಗಳೊಂದಿಗೆ ಸುಳ್ಯ ಗಾಂಧಿನಗರದಲ್ಲಿ ಶ್ರೀ ಕಲ್ಕುಡ ಪಟಾಕಿ ಅಂಗಡಿ ತೆರೆದು ಕೊಂಡಿದೆ. ಗಾಂಧಿನಗರದ ಯೂನಿಯನ್ ಬ್ಯಾಂಕ್ ಮುಂಭಾಗದಲ್ಲಿ ರವಿಚಂದ್ರ ಕೊಡಿಯಾಲಬೈಲು ಅವರ ನೇತೃತ್ವದಲ್ಲಿ ಶ್ರೀ ಕಲ್ಕುಡ ಪಟಾಕಿ ಅಂಗಡಿ ತೆರೆದಿದ್ದು ವೈವಿಧ್ಯಮಯ

ಪಟಾಕಿಗಳ ಸಂಗ್ರಹ ಇದೆ. ಮಾಲೆ ಪಟಾಕಿಗಳು, ಶಾರ್ಟ್ಸ್ಗಳು, ಗಿಪ್ಟ್ ಬಾಕ್ಸ್ಗಳು ಲಭ್ಯವಿದೆ. ನೆಲಚಕ್ರ, ದುರ್ಸು, ಸ್ಪ್ರಾಕ್ಲಿಂಗ್ ಕಡ್ಡಿಗಳು ಸೇರಿ ವೈವಿಧ್ಯಮಯ ಪಟಾಕಿಗಳು ಬಂದಿದೆ. ಎಲ್ಲಾ ಕಂಪೆನಿಯ ಗುಣಮಟ್ಟದ ಹಸಿರು ಪಟಾಕಿಗಳು ಸ್ಪರ್ಧಾತ್ಮಕ ದರದಲ್ಲಿ ಮಾರಾಟ ಮಾಡಲಾಗುತಿದೆ ಎಂದು ರವಿಚಂದ್ರ ಕೊಡಿಯಾಲಬೈಲು ತಿಳಿಸಿದ್ದಾರೆ. ನಿರಂತರ ನಾಲ್ಕನೇ ವರ್ಷದಲ್ಲಿ ಶ್ರೀ ಕಲ್ಕುಡ ಪಟಾಕಿ ಅಂಗಡಿ ಕಾರ್ಯಾಚರಿಸುತಿದೆ. ಅ.23ರಿಂದ ಪಟಾಕಿ ಅಂಗಡಿ ಆರಂಭಗೊಂಡಿದ್ದು 28ರವರೆಗೆ ಅಂಗಡಿ ಕಾರ್ಯಾಚರಿಸಲಿದೆ. ಅಂಗಡಿ ಪೂರ್ತಿ ವೈವಿಧ್ಯಮಯ ಪಟಾಕಿಗಳ ಸಂಗ್ರಹದೊಂದಿಗೆ ಗ್ರಾಹಕರನ್ನು ಕೈ ಬೀಸಿ ಕರೆಯುತಿದೆ.
