ಸುಳ್ಯ: ಸುಳ್ಯ ಗಾಂಧಿನಗರ ನಾವೂರಿನ ಕಾರಣಿಕ ಕ್ಷೇತ್ರ, ಸುಳ್ಯ ಜನತೆಯ ಆರಾಧ್ಯ ಕ್ಷೇತ್ರ ಶ್ರೀ ಕಲ್ಕುಡ ದೈವಸ್ಥಾನದಲ್ಲಿ ಭಕ್ತಿ ಸಂಭ್ರಮದ ನೇಮೋತ್ಸವ. ಇಂದು ಬೆಳಿಗ್ಗೆ 6 ಗಂಟೆಯಿಂದ ಆರಂಭಗೊಂಡ

ನೇಮೋತ್ಸವದಲ್ಲಿ ಶ್ರೀ ಕಲ್ಕುಡ ಹಾಗು ಕಲ್ಲುರ್ಟಿ ದೈವಗಳು ನೆರೆದ ಭಕ್ತರನ್ನು ಹರಸಿತು. ಕಲ್ಕುಡ, ಕಲ್ಲುರ್ಟಿ ದೈವಗಳ ನೇಮ ನಡೆದು ಪ್ರಸಾದ ವಿತರಣೆಯ ಬಳಿಕ ಶ್ರೀ ಗುಳಿಗ ದೈವದ ನೇಮೋತ್ಸವ ನಡೆಯಲಿದೆ. ನೇಮೋತ್ಸವಕ್ಕೆ ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು










