ಸುಳ್ಯ:ಸುಳ್ಯದ ಕಲ್ಕುಡ ದೈವಸ್ಥಾನದ ಜೀರ್ಣೋದ್ದಾರ ಕಾರ್ಯಕ್ಕೆ ಭೂಮಿಪೂಜೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ದೇಲಂಪಾಡಿ ಗಣೇಶ ತಂತ್ರಿ ವೈದಿಕ ಕಾರ್ಯಕ್ರಮ ನೆರವೇರಿಸಿದರು.ಎಒಎಲ್ಇ ಅಧ್ಯಕ್ಷ ಡಾ.ಕೆ.ವಿ.ಚಿದಾನಂದ ಶಿಲಾನ್ಯಾಸ ನೆರವೇರಿಸಿದರು.ಈ ಸಂದರ್ಭದಲ್ಲಿ
ಆಡಳಿತ ಸಮಿತಿಯವರು ಮತ್ತು ಜೀರ್ಣೋದ್ದಾರ ಸಮಿತಿಯವರು ಹಾಗೂ ಭಕ್ತಾದಿಗಳು ಶಿಲಾ ಕಲ್ಲಿಗೆ ಕ್ಷೀರ ಮತ್ತು ಭಕ್ತಿಯಿಂದ ಬೆಳ್ಳಿ ಬಂಗಾರ ಹಾಗೂ ನಾಣ್ಯಗಳನ್ನು ಸಮರ್ಪಿಸಿದರು.
ಆಡಳಿತ ಧರ್ಮದರ್ಶಿ ಪಿ. ಕೆ. ಉಮೇಶ, ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಕೃಷ್ಣ ಕಾಮತ್ ಅರಂಬೂರು, ಡಾ. ಗಿರೀಶ್ ಭಾರಧ್ವಾಜ್,ಕಾರ್ಯದರ್ಶಿ ಅಶೋಕ ಪ್ರಭು, ಸುಳ್ಯ,ಕೋಶಾಧಿಕಾರಿ ಅವಿನಾಶ್ ಕುರುಂಜಿ, ರಾಮಚಂದ್ರ ಆಗ್ರೋ, ಎನ್. ಎ. ರಾಮಚಂದ್ರ,ಡಿ.ಎಸ್.ಗಿರೀಶ್ ದೇಂಗೋಡಿ, ಸೋಮನಾಥ ಪೂಜಾರಿ,ಭಾಸ್ಕರ ಐಡಿಯಲ್, ಎಂ. ವೆಂಕಪ್ಪ ಗೌಡ, ಪ್ರಕಾಶ್ ಹೆಗ್ಡೆ, ಚಂದ್ರಶೇಖರ ,ಪ್ರಭಾಕರ ನಾಯರ್, ದೊಡ್ಡಣ್ಣ ಬರೆಮೇಲು, ಕೇಶವ ನಾಯಕ್, ಹರೀಶ್ ಬೂಡುಪನ್ನೆ, ಸತ್ಯಪ್ರಸಾದ್, ದಿನೇಶ್ ಮಡಪ್ಪಾಡಿ, ದಿನೇಶ್ ಕುಮಾರ್ ಕೆ. ಸಿ,ಸದಾನಂದಪಿ. ಜಿ. ಜಯರಾಮ, ಪೂಜಾರಿಗಳಾದ ಮೋಹನ ಗೌಡ ಕೆರೆಮೂಲೆ, ತಿಮ್ಮಪ್ಪ ಗೌಡ ನಾವೂರು, ಜಯಕರ ಆಚಾರ್ಯ, ಶಿಲ್ಪಿ ವಿಜಯ ಹಾಗೂ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಭಕ್ತರು ಉಪಸ್ಥಿತರಿದ್ದರು.










