ಬೆಂಗಳೂರು: ಬೆಂಗಳೂರು ಗಾಯನ ಸಮಾಜ ನೀಡುವ ‘ಶ್ರೀ ಕಲಾಜ್ಯೋತಿ ಪ್ರಶಸ್ತಿ’ಗೆ ವಿದುಷಿ ಶಂಕರಿಮೂರ್ತಿ , ಬಾಳಿಲ ಆಯ್ಕೆಯಾಗಿದ್ದಾರೆ.ಕೆ.ಆರ್ ರಸ್ತೆಯ ಗಾಯನ ಸಮಾಜ ಸಭಾಂಗಣದಲ್ಲಿ ನವೆಂಬರ್ 10 ರಂದು ಬೆಳಿಗ್ಗೆ 10.30 ಕ್ಕೆ ನಡೆಯುವ ಸಮಾರಂಭದಲ್ಲಿ ಈ ಪ್ರಶಸ್ತಿ ಸ್ವೀಕರಿಸುವರು. ಇದೇ ಸಂದರ್ಭದಲ್ಲಿ
ವೀಣಾವಾದಕ ವಿದ್ವಾನ್ ಆರ್. ಕೆ ಶಂಕರ್, ಮೃದಂಗ ವಾದಕ ವಿದ್ವಾನ್ ಎನ್. ವಾಸುದೇವ, ಪಿಟೀಲು ವಾದಕ ವಿದ್ವಾನ್ ಕೊಳ್ಳೇಗಾಲ ಗೋಪಾಲಕೃಷ್ಣ ಅವರಿಗೂ ಶ್ರೀಕಲಾ ಜ್ಯೋತಿ ಪ್ರಶಸ್ತಿ ನೀಡಲಾಗುವುದು. 54ನೇ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಈ ಎಲ್ಲ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತದೆ. ಶ್ರೀ ಯದುಗಿರಿ ಯತಿರಾಜ ನಾರಾಯಣ ರಾಮಾನುಜ ಜೀಯರ್ ಅವರು ವಿದ್ವಾನ್ ಡಾ ಎಸ್ . ಸಿ. ಶರ್ಮ ಅವರಿಗೆ ‘ಸಂಗೀತ ಕಲಾರತ್ನ’ ಪ್ರಶಸ್ತಿ, ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ವಿದ್ವಾನ್ ಮಧೂರು ಬಾಲಸುಬ್ರಹ್ಮಣ್ಯ ಅವರಿಗೆ ‘ಕರ್ನಾಟಕ ಕಲಾಚಾರ್ಯ’ ಪ್ರಶಸ್ತಿ ಪ್ರದಾನ ಮಾಡುವರು.
ಇದೇ ಸಂದರ್ಭದಲ್ಲಿ ಎಂ. ಎ . ಮೀರಾ ಅವರಿಗೆ ‘ಸ್ವರ ಭೂಷಿಣಿ’ ಪ್ರಶಸ್ತಿ, ಶ್ರೀಮತಿ ಗೀತಾ ಸೀತಾರಾಮ ಅವರಿಗೆ ‘ಲಿಪಿ ಪ್ರಾಜ್ಞೆ’ ಪ್ರಶಸ್ತಿಯನ್ನೂ ಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.