ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈ ಬಂಟ ಕಾಚು ಕುಜುಂಬ ದೈವದ ಮೂಲಸ್ಥಾನ ಗರಡಿಬೈಲಿನಲ್ಲಿ ನಿರ್ಮಾಣವಾಗುವ ಶ್ರೀ ಕಾಚುಕುಚುಂಬ ದೈವದ ನೂತನ ದೈವಸ್ಥಾನದ ಭೂಮಿ ಪೂಜಾ ಕಾರ್ಯಕ್ರಮ ಹಾಗೂ

ಶಿಲಾನ್ಯಾಸ ಮೇ.21ರಂದು ಬುಧವಾರ ಪೂರ್ವಾಹ್ನ 9ರ ಶುಭ ಮುಹೂರ್ತದಲ್ಲಿ ನಡೆಯಲಿದೆ. ಕ್ಷೇತ್ರದ ತಂತ್ರಿಗಳಾದ ಕೆಮ್ಮಿಂಜೆ ನಾಗೇಶ ತಂತ್ರಿಗಳ ಮಾರ್ಗದರ್ಶನದಲ್ಲಿ ಹಾಗೂ ಕ್ಷೇತ್ರ ದ ವಾಸ್ತು ಶಿಲ್ಪಿಗಳಾದ ಪ್ರಸಾದ್ ಮುನಿಯಂಗಳ ಇವರ ನಿರ್ದೇಶದಂತೆ ನಡೆಯಲಿದೆ. ಎಲ್ಲಾ ಭಕ್ತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿ ದೇಗುಲದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರು ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಸಲಹಾ ಸಮಿತಿ ಸದಸ್ಯರು ವಿನಂತಿಸಿದ್ದಾರೆ.





