ಪಂಜ:ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇಗುಲದ ಕದಿರು ಗದ್ದೆಯಿಂದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಕದಿರು ನೀಡಲಾಯಿತು. ಈ ಸಂದರ್ಭದಲ್ಲಿ ಪಂಜ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಡಾ.ದೇವಿಪ್ರಸಾದ್ ಕಾನತ್ತೂರ್, ವ್ಯವಸ್ಥಾಪನ ಸಮಿತಿ ಸದಸ್ಯರಾದ ಸಂತೋಷ್ ಕುಮಾರ್ ರೈ, ಕುಕ್ಕೆ ದೇಗುಲದ ಮಾಸ್ಟರ್ ಪ್ಲೇನ್ ಸದಸ್ಯರಾದ ಅಚ್ಚುತ ಆಲ್ಕಬೆ, ಪ್ರಸನ್ನ ಭಟ್ ಕುಕ್ಕೆ, ನಾಗೇಶ್ ಕುಕ್ಕೆ,ಧನುಷ್ ಕುಕ್ಕೆ ಹಾಗೂ ತೀರ್ಥ ಪ್ರಸಾದ್ ಪಳ್ಳತ್ತಡ್ಕ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕುಕ್ಕೆ ದೇಗುಲದ ವತಿಯಿಂದ ಡಾ.ದೇವಿಪ್ರಸಾದ್ ಕಾನತ್ತೂರ್ ರನ್ನು ದೇವರ ಪ್ರಸಾದ ನೀಡಿ ಸನ್ಮಾನಿಸಲಾಯಿತು.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.












