ಸುಳ್ಯ:ಗಡಿ ಪ್ರದೇಶದಲ್ಲಿ ಕಾಡಾಡನೆಗಳ ಹಿಂಡು ಪ್ರತ್ಯಕ್ಷವಾಗಿದೆ. ಮಂಡೆಕೋಕು ಗ್ರಾಮದ ವಿವಿಧ ಭಾಗಗಳಲ್ಲಿ ಕಾಡಾನೆಗಳ ದಾಳಿ ತೀವ್ರಗೊಂಡಿದ್ದು ಸುಮಾರು ಎಂಟು ಆನೆಗಳ ಹಿಂಡು ಕಂಡು ಬಂದಿದೆ. ಪಂಜಿಕಲ್ಲು ಭಾಗದಲ್ಲಿ ಕಾಡಾನೆಗಳ ಹಿಂಡು
ಕಂಡು ಬಂದಿದೆ. ರಸ್ತೆಯಲ್ಲಿಯೂ ಕಾಡಾನೆಗಳ ಹಿಂಡು ದಾಟುವ ಹಾಗೂ ವೀಡಿಯೋ ವೈರಲ್ ಆಗಿದೆ. ಕಳೆದ ಹಲವು ದಿನಗಳಿಂದ ಮಂಡೆಕೋಲುಭಾಗದಲ್ಲಿ ಕಾಡಾನೆಗಳ ಹಾವಳಿ ತೀವ್ರಗೊಂಡಿದ್ದು ಜನವಸತಿ ಪ್ರದೇಸ, ಸಾರ್ವಜನಿಕ ಸ್ಥಳಗಳಲ್ಲಿ ಕಾಡಾನೆಗಳ ಹಿಂಡು ಪ್ರತ್ಯಕ್ಷಗೊಳ್ಳುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಉಂಟು ಮಾಡಿದೆ.










