ಕಡಬ: ಜಿ.ಕೃಷ್ಣಪ್ಪ ಅವರನ್ನು ಕಾಂಗ್ರೇಸ್ ಪಕ್ಷ ಸುಳ್ಯ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿದೆ. ಅವರೇ ಕಾಂಗ್ರೇಸ್ ಪಕ್ಷದ ಅಧಿಕೃತ ಅಭ್ಯರ್ಥಿ ಪಕ್ಷದ ನಿಯಮಾವಳಿ ಪ್ರಕಾರ ಬದಲಾವಣೆ ಸಾಧ್ಯವಿಲ್ಲ ಎಂದು ಕಡಬ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ ಹೇಳಿದರು. ಅವರು ಗುರುವಾರ ಕಡಬದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ನಮ್ಮಲ್ಲಿ ಅಭ್ಯರ್ಥಿತನಕ್ಕೆ
ಗೊಂದಲಗಳನ್ನು ಸರಿಪಡಿಸಿಕೊಂಡು ಕೃಷ್ಣಪ್ಪನವರನ್ನು ನಾವು ಗೆಲ್ಲಿಸಿ ವಿಧಾನ ಸಭೆಗೆ ಕಳುಹಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕೃಷ್ಣಪ್ಪನವರು ಕಳೆದ ಎಂಟು ವರ್ಷಗಳಿಂದ ಸುಳ್ಯ ವಿಧಾನಸಭಾ ಕ್ಷೇತ್ರಾದ್ಯಂತ ಓಡಾಟ ಮಾಡಿ ಕ್ಷೇತ್ರದ ಪ್ರತೀ ಬೂತ್ನಲ್ಲಿಯೂ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರುಗಳನ್ನು ವಿಶ್ವಾಸಕ್ಕೆ ಪಡೆದುಕೊಂಡು ಪಕ್ಷ ಬಲವರ್ಧನೆ ಮಾಡುತ್ತಾ ಬಂದಿದ್ದಾರೆ. ಕೊರೋನಾ ಸಂದರ್ಭದಲ್ಲಿ ಜಾತಿ ಮತ ನೋಡದೆ ಕಿಟ್ ವಿತರಣೆ ಮಾಡಿದ್ದಾರೆ. ಸುಬ್ರಹ್ಮಣ್ಯ, ಹರಿಹರ ಪಲ್ಲತಡ್ಕ, ಕೊಲ್ಲಮೊಗ್ರು ಮುಂತಾದೆಡೆ ಪೃಕೃತಿ ವಿಕೋಪ, ಭೂಕುಸಿತ ಉಂಟಾದಾಗ ಕೃಷ್ಣಪ್ಪ ನವರು ಜನರ ನೆರವಿಗೆ ಬಂದಿದ್ದಾರೆ. ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದ್ದಾರೆ. ಪಕ್ಷ ನೀಡಿದ ಜವಾಬ್ದಾರಿಯನ್ನು ಯಶಸ್ವಿಯಗಿ ನಿರ್ವಹಿಸಿದ್ದಾರೆ ಈ ಎಲ್ಲ ಹಿನ್ನೆಲೆಯಲ್ಲಿ ಹೈಕಮಾಂಡ್ ಅವರಿಗೆ ಟಿಕೇಟ್ ನೀಡಿದೆ ಎಂದರು.
ನಂದಕುಮಾರ್ ಅಭಿಮಾನಿಗಳು ಅಭ್ಯರ್ಥಿ ಬದಲಾವಣೆಯ ಮಾಡಬೇಕೆಂದು ಪಕ್ಷದ ಮುಂಖಡರಿಗೆ ಮನವಿ ಮಾಡಿರುವ ಬಗ್ಗೆ ಉತ್ತರಿಸಿದ ಸುಧೀರ್ ಕುಮಾರ್ ಅವರು ಕ್ಷೇತ್ರದಲ್ಲಿ ಅನೇಕ ಆಕಾಂಕ್ಷಿಗಳು ಇದ್ದಾರೆ. ನಂದಕುಮಾರ್ ಕೂಡಾ ಆಕಾಂಕ್ಷಿಯಾಗಿದ್ದರು. ಟಕೇಟು ಸಿಗದೇ ಇದ್ದಾಗ ಅಸಮಾಧಾನ ಸಹಜ. ಗೊಂದಲಗಳನ್ನು ಸರಿಪಡಿಸುವ ಶಕ್ತಿ ಪಕ್ಷಕ್ಕಿದೆ. ಅಸಮಾಧಾನ ವ್ಯಕ್ತಪಡಿಸಿದ ನಾಯಕರುಗಳು ಸಂಪರ್ಕದಲ್ಲಿದ್ದಾರೆ, ಎಲ್ಲರೂ ಒಟ್ಟಾಗಿದ್ದೇವೆ, ಹೈಕಮಂಡ್ ಅಭ್ಯರ್ಥಿ ಘೋಷಣೆ ಮಾಡಿದ ಬಳಿಕ ನಾವು ಅಭ್ಯರ್ಥಿಯ ಗೆಲುವಿಗೆ ಒಟ್ಟಾಗಿ ಶ್ರಮಿಸುತ್ತೇವೆ. 28 ವರ್ಷಗಳಿಂದ ಕ್ಷೇತ್ರದಲ್ಲಿ ಕಾಂಗ್ರೇಸ್ ಶಾಸಕರಿಲ್ಲದ ಕೊರಗನ್ನು ಈ ಬಾರಿ ನೀಗಿಸುತ್ತೇವೆ ಎಂದು ಸುಧೀರ್ ಹೇಳಿದರು.

ಕ್ಷೇತ್ರದ ಜನರ ಸೇವೆ ಮಾಡಲು ಅವಕಾಶ ನೀಡಿ:ಜಿ.ಕೃಷ್ಣಪ್ಪ ಮನವಿ
ಅಭ್ಯರ್ಥಿ ಜಿ.ಕೃಷ್ಣಪ್ಪ ಮಾತನಾಡಿ, ನನ್ನ ಪತ್ನಿ ಮನೆ ಕ್ಷೇತ್ರದ ರಾಮಕುಂಜದಲ್ಲಿದೆ, ಪಕ್ಷ ನನಗೆ ಜವಾಬ್ದಾರಿ ನೀಡಿದ ಬಳಿಕ ಕ್ಷೇತ್ರದಲ್ಲಿ ವಿವಿಧ ಚುನಾವಣೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ, ಆಲಂಕಾರಿನಿಂದ ಕಡಬ ತನಕ ನಡೆದ ಕಾಂಗ್ರೇಸ್ ಕಾಲ್ನಡಿಗೆ ಯಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ಮಾಡಲಾಗಿದೆ, ಭಾರತ್ ಜೋಡೋ ಕಾರ್ಯಕ್ರಮ ಕುಡಾ ಜಿಲ್ಲೆಯಲ್ಲೇ ಹೆಚ್ಚು ಪರಿಣಾಮಕಾರಿಯಾಗಿ ಕ್ಷೇತ್ರತ್ರದಲ್ಲಿ ನಡೆದಿದೆ. ಕಾಂಗ್ರೇಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯಾಧ್ಯಕ್ಷರಾಗಿದ್ದಾಗ ಅವರು ನಿಡಿದ ರಾಜ್ಯ ಮಟ್ಟದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ ಈಗ ಸುಳ್ಯ ವಿಧಾನ ಸಭೆಗೆ ಸ್ಪರ್ಧಿಸಲು ಪಕ್ಷ ಅವಕಾಶ ಕಲ್ಪಿಸಿದೆ, ನನ್ನನ್ನು ಗೆಲ್ಲಿಸಿ ಕ್ಷೇತ್ರದ ಸೇವೆ ಮಾಡಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ಪತ್ರಿಕಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಪಿ.ಪಿ.ವರ್ಗೀಸ್, ಸರ್ವೋತ್ತಮ ಗೌಡ, ಸತೀಶ್ ಮೇಲಿನಮನೆ, ಕೆ.ಪಿ.ತೋಮಸ್, ಎಚ್.ಆದಂ, ದಿವಾಕರ ಗೌಡ ಶಿರಾಡಿ, ರಾಯ್ ಅಬ್ರಹಾಂ, ಮಾಧವ ಪೂಜಾರಿ, ಬಾಬು ಮುಗೇರ, ಅಝೀಜ್ ಕೋಲ್ಪೆ ಮತ್ತಿತರರು ಉಪಸ್ಥಿತರಿದ್ದರು.