ಕಡಬ: ಕಡಬ ಪಟ್ಟಣ ಪಂಚಾಯಿತಿಗೆ ಆಗಸ್ಟ್ 17 ರಂದು ಚುನಾವಣೆ ನಡೆಯಲಿದ್ದು, ಗುರುವಾರ ನಾಮತ್ರ ಪರಿಶೀಲನೆ ನಡೆದು ಶುಕ್ರವಾರ ನಾಮಪತ್ರ ವಾಪಾಸ್ಸು ಪ್ರಿಕ್ರಿಯೆ ನಡೆಯಿತು. 13ವಾರ್ಡ್ಗಳಿಗೆ ನಡೆಯುವ ಚುನಾವಣೆಗೆ ಅಂತಿಮ ಕಣದಲ್ಲಿ ಒಟ್ಟು 32 ಅಭ್ಯರ್ಥಿಗಳು ಉಳಿದುಕೊಂಡಿದ್ದಾರೆ ಎಂದು
ಚುನಾವಣಾಧಿಕಾರಿ, ಲೋಕೋಪಯೋಗಿ ಇಲಾಖಾ ಸುಬ್ರಹ್ಮಣ್ಯ ವಿಶೇಷ ವಿಭಾಗದ ಸಹಾಯಕ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ. ಹೇಳಿದರು. ಅವರು ಶುಕ್ರವಾರ ಸಂಜೆ ಕಡಬ ಪಟ್ಟಣ ಪಂಚಾಯಿತಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಹದಿಮೂರು ವಾರ್ಡ್ಗಳಿಗೆ ಒಟ್ಟು 47 ನಾಮಪತ್ರ ಸಲ್ಲಿಕೆಯಾಗಿ, ಹನ್ನೊಂದು ನಾಮಪತ್ರ ತಿರಸ್ಕೃತಗೊಂಡಿತ್ತು, 36 ನಾಮಪತ್ರಗಳು ಕ್ರಮ ಬದ್ಧವಾಗಿದ್ದವು, ನಾಲ್ವರು ನಾಮಪತ್ರ ವಾಪಾಸ್ಸು ಪಡೆದು 32 ಜನ ಅಂತಿವಾಗಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿದ್ದಾರೆ. ಕಡಬ ಪಟ್ಟಣ ಪಂಚಾಯತ್ ಅಸ್ತಿತ್ವಕ್ಕೆ ಬಂದ ಬಳಿಕ ಪ್ರಥಮ ಬಾರಿಗೆ ಚುನಾವಣೆ ನಡೆಯುತಿದೆ.
ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಎಲ್ಲಾ 13 ವಾರ್ಡ್ಗಳಲ್ಲಿ ಸ್ಪರ್ಧಿಸುತ್ತಿದ್ದಾರೆ.
ಹಿಂದುಳಿದ ವರ್ಗ ಎ ಮಹಿಳೆಗೆ ಮೀಸಲಾದ ಕಳಾರ ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ತಮನ್ನಾ ಜಬಿನ್, ಬಿಜೆಪಿಯಿಂದ ಪ್ರೇಮಾ , ಎಸ್ಡಿಪಿಐ ನಿಂದ ಸಮೀರಾ ಹಾರಿಸ್, ಪಕ್ಷೇತರರಾಗಿ ಜೈನಾಬಿ , ಪರಿಶಿಷ್ಠ ಜಾತಿ ಮಹಿಳೆಗೆ ಮೀಸಲಾದ ಕೋಡಿಬೈಲು ಕ್ಷೆತ್ರಕ್ಕೆ ಕಾಂಗ್ರೇಸ್ನಿಂದ ಮೊಹಿನಿ, ಬಿಜೆಪಿಯಿಂದ ಕುಸುಮ ಅಂಗಡಿಮನೆ, ಸಾಮಾನ್ಯಕ್ಕೆ ಮೀಸಲಾದ ಪನ್ಯ ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ಮಹಮ್ಮದ್ ಫೈಝಲ್, ಬಿಜೆಪಿಯಿಂದ ಆದಂ ಕುಂಡೋಳಿ, ಎಸ್ಡಿಪಿಐ ನಿಂದ ಹಾರೀಸ್ ಕಳಾರ, ಮುಸ್ಲಿಂಲೀಗ್ನಿಂದ ಕೆ.ಅಬ್ದುಲ್ ರಝಾಕ್, ಸಾಮಾನ್ಯ ಕ್ಕೆ ಮೀಸಲಾದ ಬೆದ್ರಾಜೆ ಕ್ಷೇತ್ರಕ್ಕೆ ಕಾಂಗ್ರೇಸ್ನಿಙದ ಸೈಮನ್ ಸಿ.ಜೆ, ಬಿಜೆಪಿಯಿಂದ ಅಶೋಕ್ ಪಿ., ಹಿಂದುಳಿದ ವರ್ಗ ಎ ಗೆ ಮೀಸಲಾದ ಮಾಲೇಶ್ವರ ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ಹನೀಫ್ ಕೆ.ಎಂ., ಬಿಜೆಪಿಯಿಂದ ಪ್ರಕಾಶ್ ಎನ್ ಕೆ., ಸಾಮಾನ್ಯ ಮಹಿಳೆಗೆ ಮೀಸಲಾದ ಕಡಬ ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ನೀಲಾವತಿ ಶಿವರಾಮ್, ಬಿಜೆಪಿಯಿಂದ ಪ್ರೇಮಾ , ಪಕ್ಷೇತರರಾಗಿ ಆಲೀಸ್ ಚಾಕೊ, ಎಸ್ಡಿಪಿಐ ನಿಂದ ಸ್ವಾಲಿಯತ್ ಜಸೀರಾ, ಹಿಂದುಳಿದ ವರ್ಗ ಬಿ ಗೆ ಮೀಸಲಾದ ಪಣೆಮಜಲು ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ರೋಹಿತ್ ಗೌಡ, ಬಿಜೆಪಿಯಿಂದ ಗಣೇಶ ಗೌಡ, ಸಾಮಾನ್ಯಕ್ಕೆ ಮೀಸಲಾದ ಪಿಜಕ್ಕಳ ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ಅಶ್ರಫ್ ಶೇಡಿಗುಂಡಿ, ಬಿಜೆಪಿಯಿಂದ ದಯಾನಂದ ಗೌಡ ಪಿ., ಹಿಂದುಳಿದ ವರ್ಗ ಎ ಗೆ ಮೀಸಲಾದ ಮೂರಾಜೆ ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ಕೃಷ್ಣಪ್ಪ ಪೂಜಾರಿ, ಬಿಜೆಪಿಯಿಂದ ಕುಂಞಣ್ಣ ಕುದ್ರಡ್ಕ, ಸಾಮಾನ್ಯ ಮಹಿಳೆ ಗೆ ಮಿಸಲಾದ ದೊಡ್ಡಕೊಪ್ಪ ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ತುಳಸಿ, ಬಿಜೆಪಿಯಿಂದ ಗುಣವತಿ ರಘರಾಮ, ಸಾಮಾನ್ಯ ಮಹಿಳೆಗೆ ಮೀಸಲಾದ ಕೋಡಿಂಬಾಳ ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ಜ್ಯೋತಿ ಡಿ.ಕೋಲ್ಪೆ, ಬಿಜೆಪಿಯಿಂದ ಅಕ್ಷತಾ ಬಾಲಕೃಷ್ಣ ಗೌಡ, ಪರಿಶಿಷ್ಠ ಜಾತಿ ಗೆ ಮೀಸಲಾದ ಮಜ್ಜಾರು ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ಉಮೇಶ್ ಮಡ್ಯಡ್ಕ, ಬಿಜೆಯಿಂದ ಮೋಹನ , ಪರಿಶಿಷ್ಠ ಪಂಗಡ ಕ್ಕೆ ಮೀಸಲಾದ ಪುಳಿಕುಕ್ಕು ಕ್ಷೇತ್ರಕ್ಕೆ ಕಾಂಗ್ರೇಸ್ನಿಂದ ಕೃಷ್ಣ ನಾಯ್ಕ, ಬಿಜೆಪಿಯಿಂದ ಸದಾನಂದ ನಾಯ್ಕ, ಕಣದಲ್ಲಿ ಉಳಿದುಕೊಂಡಿದ್ದಾರೆ ಎಂದು ಹೇಳಿದ ಪ್ರಮೋದ್ ಕುಮಾರ್ ಚುನಾವಣೆಗೆ ಬೇಕಾದ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ,
ಪ್ರತೀ ವಾರ್ಡ್ ಗಳಲ್ಲಿ ಮಗಟ್ಟೆಗಳನ್ನು ತೆರೆಯಲಾಗುವುದು, ಒಟ್ಟು 8336 ಅರ್ಹ ಮತದಾರರಿದ್ದು 4018 ಪುರುಷ ಹಾಗೂ 4318 ಮಹಿಳಾ ಮತದಾರಿದ್ದಾರೆ ಎಂದು ವಿವರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಕಡಬ ತಹಸೀಲ್ದಾರ್ ಪ್ರಭಾಕರ ಖಜೂರೆ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೀಲಾವತಿ ಇ., ಉಪತಹಸೀಲ್ದಾರ್ ಸಾಯಿದುಲ್ಲಾ ಖಾನ್, ಚುನವಣಾಧಿಕಾರಿಗಳಾದ ಅರಣ್ಯಧಿಕಾರಿ ವಿಮಲ್ ಬಾಬು, ಜಿಲ್ಲಾ ಪಂಚಾಯಿತಿ ಇಂಜಿನಿಯರ್ ಸಂಗಪ್ಪ ಹುಕ್ಕೇರಿ, ಸಹಾಯಕ ಚುನಾವಣಾಧಿಕಾರಿಗಳಾದ ಭುನೇಂದ್ರ ಕುಮಾರ್ , ಸಂದೇಶ್, ಪಟ್ಟಣ ಪಂಚಾಯಿತಿ ಇಂಜಿನಿಯರ್ ಶಿವಕುಮಾರ್ ಎಂ.ಡಿ, ಲೆಕ್ಕಪತ್ರ ನೋಂದನಾಧಿಕಾರಿ ಭವ್ಯಾ ಎಂ.ಡಿ. ಪಟ್ಟಣ ಪಚಾಯಿತಿ ಸಿಬ್ಬಂದಿ ಹರೀಶ್ ಬೆದ್ರಜೆ ಉಪಸ್ಥಿತರಿದ್ದರು.





