ಕಡಬ: ಕಡಬ ಪಟ್ಟಣ ಪಂಚಾಯಿತಿಯಗೆ ನಡೆದ ಪ್ರಥಮ ಚುನಾವಣೆಯಲ್ಲಿ ಶೇ.79.83 ಮತದಾನವಾಗಿದೆ. ಬೆಳಿಗ್ಗೆ 7 ರಿಂದ ಸಂಜೆ ಐದರ ತನಕ ಶಾಂತಿಯುತ ಮತದಾನವಾಗಿದೆ. 8,360 ಮತದಾರರ ಪೈಕಿ 6,674 ಮತದಾರರು ಮತದಾನ ಮಾಡಿದರು.13 ವಾರ್ಡ್ಗಳಲ್ಲಿ ಸ್ಪರ್ಧಿಸುವ 32 ಅಭ್ಯರ್ಥಿಗಳ ಭವಿಷ್ಯ
ಮತಪೆಟ್ಟಿಗೆಯಲ್ಲಿ ಭಧ್ರವಾಗಿದೆ. 13 ವಾರ್ಡ್ಗಳ ಪೈಕಿ ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲಾ ಕ್ಷೇತ್ರಗಳನ್ನು ಅಭ್ಯರ್ಥಿಗಳನ್ನು ಕಣಕಕ್ಕಿಳಿಸಿದ್ದು, ಎಸ್.ಡಿ.ಪಿ.ಐ 3, ಮುಸ್ಲೀಂ ಲೀಗ್-1, ಪಕ್ಷೇತರರು-2 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದಾರೆ.
ಮತಗಟ್ಟೆಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ, ಬಿಜೆಪಿ ಮುಖಂಡರಾದ ಕೃಷ್ಣ ಶೆಟ್ಟಿ ಕಡಬ, ವೆಂಕಟ್ ವಳಲಂಬೆ , ರಾಕೇಶ್ ರೈ , ರವೀಂದ್ರ ಶೆಟ್ಟಿ ಉಳಿತೊಟ್ಟು, ಗಣೇಶ್ ಉದನಡ್ಕ, ಕಾಂಗ್ರೇಸ್ ಮುಖಂಡರಾದ ಜಿ.ಕೃಷ್ಣಪ್ಪ ರಾಮಕುಂಜ , ಪಿ.ಪಿ.ವರ್ಗೀಸ್, ಭರತ್ ಮುಂಡೋಡಿ, ಸತೀಶ್ ಕುಮಾರ್ ಕೆಡೆಂಜಿ, ವಿಜಯಕುಮಾರ್ ರೈ, ಸುಧೀರ್ ಕುಮಾರ್ ಶೆಟ್ಟಿ , ಅಭಿಲಾಷ್ ಪಿ.ಕೆ., ಉಷಾ ಅಂಚನ್, ಬಾಲಕೃಷ್ಣ ಬಳ್ಳೇರಿ , ನೂರೂದೀನ್ ಸಾಲ್ಮರ ಮತ್ತಿತರರ ನಾಯಕರು ಆಗಮಿಸಿದರು.





