ಕಡಬ:ಕಡಬದಲ್ಲಿ ನರ ಹಂತಕ ಕಾಡಾನೆಯನ್ನು ಸೆರೆ ಹಿಡಿಯಲು ‘ಆಫರೇಷನ್ ಎಲಿಫೆಂಟ್’ ಆರಂಭಗೊಂಡಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಲು ಅಪರೂಪ ಎನಿಸಿದ ಆನೆ ಸೆರೆ ಕಾರ್ಯಾಚರಣೆ ಇಲ್ಲಿ ನಡೆಯುತಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡಂಚಿನ ವಿವಿಧ ಗ್ರಾಮಗಳಲ್ಲಿ ಆನೆಗಳ ಉಪಟಳ ಅಧಿಕ ಇದ್ದರೂ ಇಲ್ಲಿ ಆನೆಗಳ ಸೆರೆ ಹಿಡಿಯುವ
ಕಾರ್ಯಾಚರಣೆ ನಡೆದಿಲ್ಲ.ಆನೆ ಮಾನವ ಸಂಘರ್ಷ ಅಧಿಕ ಆಗಿರುವ ಕೊಡಗು, ಹಾಸನ ಜಿಲ್ಲೆಗಳಲ್ಲಿ ಕಾಡಾನೆ ಸೆರೆ ಹಿಡಿಯುವ ಕಾರ್ಯಾಚರಣೆ ಸಾಮಾನ್ಯವಾಗಿ ಕಂಡು ಬರುತ್ತದೆ.ಕಡಬ ತಾಲೂಕಿನ ರೆಂಜಿಲಾಡಿಯಲ್ಲಿ ಕಾಡಾನೆ ದಾಳಿಗೆ ಇಬ್ಬರು ಮೃತಪಟ್ಟ ಹಿನ್ನಲೆಯಲ್ಲಿ ಕಾಡಾನೆಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ಆರಂಭಿಸಲಾಗಿದೆ.

ಕಾರ್ಯಾಚರಣೆ ಹೇಗೆ ನಡೆಯುತ್ತದೆ..?
ಈ ಭಾಗದಲ್ಲಿ ಅಪರೂಪ ಎನಿಸಿರುವ ಕಾಡಾನೆ ಸೆರೆಯ ವಿವಿಧ ಹಂತಗಳನ್ನು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ದಿನೇಶ್ ಕುಮಾರ್ ವಿವರಿಸಿದ್ದಾರೆ.
ಅರಣ್ಯ ಇಲಾಖೆ, ತಜ್ಞ ವೈದ್ಯರು, ಆನೆಗಳ ಇರುವಿಕೆ ಪತ್ತೆ ಹಚ್ಚುವ ತಜ್ಞರ ತಂಡ ಸಾಕಾನೆಗಳ ಸಹಕಾರದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆಸಲಾಗುತ್ತದೆ.ಇದಕ್ಕಾಗಿ ನಾಗರಹೊಳೆ ಮತ್ತು ದುಬಾರೆ ಸಾಕಾನೆ ಶಿಬಿರದಿಂದ 5 ಸಾಕಾನೆಗಳು ಆಗಮಿಸಿದೆ. ಕಾಡಾನೆ ಸೆರೆ
ಕಾಡಾನೆ ಸೆರೆ ಕಾರ್ಯಾಚರಣೆ ಆರಂಭ ವೀಡಿಯೋ ವೀಕ್ಷಿಸಿ
ಹಿಡಿಯುವುದರಲ್ಲಿ ಪಳಗಿರುವ ಅಭಿಮನ್ಯು, ಪ್ರಶಾಂತ್, ಹರ್ಷ,ಕಂಜನ್ ಹಾಗು ಮಹೇಂದ್ರ ಎಂಬ ಸಾಕಾನೆಗಳು ಕಾರ್ಯಾಚರಣೆಗೆ ಬಂದಿದೆ. ಕಾರ್ಯಾಚರಣೆಗಾಗಿ ತಂಡಗಳನ್ನು ರಚಿಸಲಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಮತ್ತು ಆನೆಗಳ ಚಲನವಲನ ಪತ್ತೆ ಹಚ್ಚುವ ತಜ್ಞರ ತಂಡ ಅರಣ್ಯದಲ್ಲಿ ಸುತ್ತಾಡಿ ಕಾಡಾನೆಯ ಚಲನ ವಲನಗಳನ್ನು ಪತ್ತೆ ಹಚ್ಚಲಾಗುತ್ತದೆ. ಆನೆಯ ಇರುವಿಕೆಯನ್ನು ಗುರುತಿಸಿದ ಬಳಿಕ ತಜ್ಞ ವೈದ್ಯರ ತಂಡ ಅರಿವಳಿಕೆ ಔಷಧಿ ಡಾಟ್ ಮಾಡಲಾಗುತ್ತದೆ.ಸ್ವಲ್ಪ ಹೊತ್ತು ಓಡಾಡಿ ಆನೆಯು ನಿಲ್ಲುತ್ತದೆ. ಆ ಸಂದರ್ಭದಲ್ಲಿ ಸಾಕಾನೆಗಳ ಸಹಕಾರದಲ್ಲಿ ಕಾಡಾನೆಯನ್ನು ಬಂದಿಸಿ ಶಿಬಿರಕ್ಕೆ ಕರೆದೊಯ್ಯಲಾಗುತ್ತದೆ ಎಂದು ಅವರು ವಿವರಿಸಿದರು.
