ಸಳ್ಯ: ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಡಬ ತಾಲೂಕಿನ ಶಾಸಕರ ಕಚೇರಿ , ಜೂ.30 ರಂದು ಕಡಬ ಮಿನಿ ವಿಧಾನಸೌಧದಲ್ಲಿ ಕಾರ್ಯಾರಂಭ ಮಾಡಿತು ಬೆಳಿಗ್ಗೆ ಗಣಹೋಮದ ಬಳಿಕ ದೀಪ ಪ್ರಜ್ವಲನೆ ಮಾಡಿ ಉದ್ಘಾಟನೆ ನಡೆಯಿತು. ಜನಸಂಘ ಮತ್ತು ಬಿಜೆಪಿಯ ಹಿರಿಯ
ಕಾರ್ಯಕರ್ತರಾದ ಹರಿಶ್ಚಂದ್ರ ರೈ ಪಟ್ಟೆಗುತ್ತು ಪೆರಾಬೆ, ತನಿಯಪ್ಪ ಮಜಗುಡ್ಡೆ ಕಡಬ, ಕುಶಾಲಪ್ಪ ಗೌಡ ಕುಡಾಲ ಅವರು ದೀಪ ಪ್ರಜ್ವಲನೆ ಮಾಡುವ ಮೂಲಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ, ಪ್ರಧಾನ ಕಾರ್ಯದರ್ಶಿಗಳಾದ ಸುಬೋದ್ ಶೆಟ್ಟಿ ಮೇನಾಲ, ರಾಕೇಶ್ ರೈ ಕೆಡೆಂಜಿ, ಪಕ್ಷದ ಪ್ರಮುಖರಾದ ಎ.ವಿ.ತೀರ್ಥರಾಮ, ಆಶಾ ತಿಮ್ಮಪ್ಪ, ವೆಂಕಟ್ ವಳಲಂಬೆ, ಕೃಷ್ಣ ಶೆಟ್ಟಿ ಕಡಬ, ಪುಲಸ್ಯ ರೈ, ಮಹೇಶ್ ಕುಮಾರ್ ರೈ ಮೇನಾಲ, ಶ್ರೀಕೃಷ್ಣ ಎಂ.ಆರ್.
ಹಿರಿಯರು, ಮಹಾಶಕ್ತಿಕೇಂದ್ರ, ಶಕ್ತಿಕೇಂದ್ರ ಪ್ರಮುಖರು, ಚುನಾಯಿತ ಜನಪ್ರತಿನಿದಿಗಳು, ಬೂತ್ ಸಮಿತಿ ಪದಾಧಿಕಾರಿಗಳು, ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು.