ಪಂಜ:ಪಂಜ ಸೀಮೆಯ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರ ಬಲಗೈಬಂಟ ಶ್ರೀ ಕಾಚುಕುಜುಂಬ ದೈವದ ನೇಮೋತ್ಸವ ಇಂದು ರಾತ್ರಿ
ನಡೆಯಲಿದೆ. ಪಂಬೆತ್ತಾಡಿ ಗ್ರಾಮದ ಗರಡಿಬೈಲಿನ
ಮೂಲಸ್ಥಾನದಲ್ಲಿ ಎರಡು ತಿಂಗಳ ಹಿಂದೆ ಶ್ರೀ ಕಾಚುಕುಚುಂಬ ದೈವಸ್ಥಾನದಲ್ಲಿ ಪುನಃಪ್ರತಿಷ್ಠೆ ನಡೆದಿತ್ತು.ಕಾಚುಕುಜುಂಬ ದೈವದ ನೇಮೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಪ್ರಸಾದ ಸ್ವೀಕರಿಸಬೇಕು ಎಂದು ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂರ್ ವಿನಂತಿಸಿದ್ದಾರೆ. ಇಂದು
ಮುಂಜಾನೆ ಕವಾಟೋದ್ಘಾಟನೆ, ದೇವರಿಗೆ ಅಭಿಷೇಕ, ಮಹಾಪೂಜೆ ನಡೆದು ಬೆಳಿಗ್ಗಿನಿಂದ ಗರಡಿಬೈಲು ಮೂಲನಾಗನಕಟ್ಟೆಯಲ್ಲಿ ತಂಬಿಲಸೇವೆ ನಡೆಯಿತು. ಬಲಿ ಹೊರಟು, ಕಾಚುಕುಜುಂಬ ದೈವದ ನರ್ತನ ಸೇವೆಯೊಂದಿಗೆ ನಾಗತೀರ್ಥ ಜಳಕದ ಹೊಳೆಯಲ್ಲಿ ಶ್ರೀ ದೇವರ ಅವಭೃತ ಸ್ನಾನ, ಧ್ವಜಾವರೋಹಣ, ಮಹಾಪೂಜೆ, ಅನ್ನಸಂತರ್ಪಣೆ ನಡೆಯಿತು.
ಸಂಜೆ ದೇಗುಲದ ಭಂಡಾರ ಮನೆಯಿಂದ ಶ್ರೀ ಉಳ್ಳಾಕುಲು ಮತ್ತು ಕಾಚುಕುಜುಂಬದ ಭಂಡಾರವನ್ನು ಮೂಲಸ್ಥಾನ ಗರಡಿಬೈಲಿಗೆ ಮೆರವಣಿಗೆಯಲ್ಲಿ ತಂದು, ಸಂಜೆ ಧ್ವಜಾರೋಹಣವಾಗಿ ಶ್ರೀ ಉಳ್ಳಾಕುಲು ದೈವದ ನೇಮ, ರಾತ್ರಿ 8ರಿಂದ ಶ್ರೀ ಕಾಚುಕುಜುಂಬ ದೈವದ ನೇಮ, ಪ್ರಸಾದ ವಿತರಣೆ, ಧ್ವಜಾವರೋಹಣ ನಡೆಯಲಿದೆ.ಬಳಿಕ ಶ್ರೀ ಉಳ್ಳಾಕುಲು ಮತ್ತು ಕಾಚುಕುಜುಂಬ ದೈವದ ಭಂಡಾರವನ್ನು ಮೆರವಣಿಗೆಯಲ್ಲಿ ದೇಗುಲದ ಭಂಡಾರ ಮನೆಗೆ ತರಲಾಗುವುದು.







