ಸುಳ್ಯ:ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಕಬಡ್ಡಿ ಪಂದ್ಯಾಟದಲ್ಲಿ ಇಂದಿನ ಪಂದ್ಯದಲ್ಲಿ ಪುರುಷ ವಿಭಾಗದ ಲೀಗ್ ಹಂತದಲ್ಲಿ ನಾಲ್ಕು ಪಂದ್ಯಗಳು ನಡೆಯಲಿದೆ. ಮಹಿಳಾ ವಿಭಾಗದ ಪಂದ್ಯಗಳು ಇಂದಿನಿಂದ ಆರಂಭಗೊಳ್ಳಲಿದೆ. ಪುರುಷ ವಿಭಾಗದಲ್ಲಿ ಪೂಲ್ ‘ಎ’ ಯಲ್ಲಿ ಬ್ಯಾಂಕ್ ಬರೋಡ ಮತ್ತು ವೆಲ್ಲಾಲಗರ್ ಪಾಂಡಿಚೇರಿ, ಪೂಲ್ ಬಿ ಯಲ್ಲಿ ಯೇನೇಪೋಯ ಯೂನಿವರ್ಸಿಟಿ ಮತ್ತು ಇಎಸ್ಐ ದೆಹಲಿ, ಪೂಲ್ ಸಿ ಯಲ್ಲಿ ಆಳ್ವಾಸ್ ಮೂಡಬಿದ್ರೆ ಮತ್ತು ದೂರೈಸಿಂಗಂ, ಪೂಲ್ ಡಿ ಯಲ್ಲಿ
ಫ್ರೆಂಡ್ಸ್ ಕ್ಲಬ್ ಕಡಬ ಮತ್ತು ಅನ್ನಪೂರ್ಣೇಶ್ವರಿ ಬೆಂಗಳೂರು ಮಧ್ಯೆ ಪಂದ್ಯಾಟ ನಡೆಯಲಿದೆ. ಮಹಿಳಾ ವಿಭಾದ ಲೀಗ್ ಪಂದ್ಯಾಟಗಳು ಇಂದು ಅರಂಭಗೊಳ್ಳಲಿದೆ.ಮಹಿಳಾ ವಿಭಾಗದಲ್ಲಿ ಟಿಎಂಸಿ ಥಾಣೆ, ಕನ್ಯಾಕುಮಾರಿ, ಪಾಂಡಿಚೇರಿ ಮತ್ತು ನ್ಯಾಷನಲ್ ಬೆಂಗಳೂರು ತಂಡಗಳು ಭಾಗವಹಿಸಲಿದೆ.
ಲೀಗ್ ಮಾದರಿಯಲ್ಲಿ ಪಂದ್ಯಾಟ ನಡೆಯಲಿದೆ. ಟಿಎಂಸಿ ಥಾಣೆ ಮತ್ತು ಕನ್ಯಾಕುಮಾರಿ, ಪಾಂಡಿಚೇರಿ ಮತ್ತು ನ್ಯಾಷನಲ್ ಬೆಂಗಳೂರು, ಟಿಎಂಸಿ ಥಾಣೆ ಮತ್ತು ಪಾಂಡಿಚೇರಿ, ನ್ಯಾಷನಲ್ ಬೆಂಗಳೂರು ಮತ್ತು ಕನ್ಯಾಕುಮಾರಿ, ಪಾಂಡಿಚೇರಿ ಮತ್ತು ಕನ್ಯಾಕುಮಾರಿ, ನ್ಯಾಷನಲ್ ಬೆಂಗಳೂರು ಮತ್ತು ಟಿಎಂಸಿ ಥಾಣೆ ಮಧ್ಯೆ ಪಂದ್ಯ ನಡೆಯಲಿದೆ. ಪುರುಷರ ವಿಭಾಗದಲ್ಲಿ 4 ಪಂದ್ಯಗಳು ಹಾಗೂ ಮಹಿಳಾ ವಿಭಾಗದಲ್ಲಿ 6 ಪಂದ್ಯಗಳು ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ. ಸಂಜೆ 5 ಗಂಟೆಯಿಂದ ಪಂದ್ಯಾಟ ಆರಂಭಗೊಳ್ಳಲಿದೆ. ಧ್ವನಿ ಬೆಳಕು ಮತ್ತು
ಳಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ
ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತಿದೆ.







