ಸುಳ್ಯ:ಸುಳ್ಯದಲ್ಲಿ ನಡೆಯುತ್ತಿರುವ ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದ ಅತ್ಯಂತ ಬಿರುಸಿನ ಪಂದ್ಯದಲ್ಲಿ ಮಹಾರಾಷ್ಟ್ರದ ಟಿಎಂಸಿ ತಾಣೆ ತಂಡ ರೋಚಕ ಗೆಲುವು ದಾಖಲಿಸಿದೆ. ಬಿರುಸಿನ ಪೈಪೋಟಿ ನೀಡಿದ ಅನ್ನಪೂರ್ಣೇಶ್ವರಿ ಬೆಂಗಳೂರು ತಂಡವನ್ನು ಟಿಎಂಸಿ ತಾಣೆ ತಂಡ 39-31 ಸ್ಕೋರ್ ಅಂತರದಲ್ಲಿ ಸೋಲಿಸಿತು. ಸಮಬಲದಲ್ಲಿ ಸಾಗಿದ ಪಂದ್ಯ ಪ್ರೇಕ್ಷಕರಿಗೆ ಕಬಡ್ಡಿಯ ರೋಚಕ ಕ್ಷಣಗಳನ್ನು ಉಣ ಬಡಿಸಿತು. ಮಧ್ಯಮ

ವಿರಾಮದ ವೇಳೆಗೆ 19-17 ಸ್ಕೋರ್ ಇತ್ತು. ಸಮಬಲದಲ್ಲಿಯೇ ಸಾಗಿದ ಪಂದ್ಯದಲ್ಲಿ ತಾಣೆ ಹಾಗೂ ಬೆಂಗಳೂರು 29-26, 34-29 ಸ್ಕೋರ್ ಅಂತರದಲ್ಲಿ ಬಿರುಸಿನ ಪೈಪೋಟಿ ನಡೆಯಿತು. ಭರ್ಜರಿ ಆಟದ ಮೂಲಕ ಅಂಕ ಗಳಿಸುತ್ತಾ ಸಾಗಿದ ಬೆಂಗಳೂರು ಅಂಕಗಳನ್ನು ಗಳಿಸುತ್ತಾ ಏರಿಸಿದರೆ, ಅತ್ಯುತ್ತಮ ಪ್ರದರ್ಶನದ ಮೂಲಕ ತಾಣೆ ಮುನ್ನಡೆ ಕಾಯ್ದುಕೊಂಡು ಅಂಕಗಳನ್ನು ಗಳಿಸುತ್ತಾ ಸಾಗಿತು. ಉತ್ತಮ ದಾಳಿ ಮತ್ತು ಹಿಡಿತಗಳ ಮೂಲಕ ಪಂದ್ಯದಲ್ಲಿ ಎರಡೂ ತಂಡಗಳು ತೀವ್ರ ಪೈಪೋಟಿ ನೀಡಿದರೂ ಗೆಲುವು ತಾಣೆ ಪಾಲಾಯಿತು. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ 3 ದಿನಗಳ
ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತಿದೆ.









