ಸುಳ್ಯ: ದೇಶೀಯ ಕ್ರೀಡೆಯಾದ ಕಬಡ್ಡಿಗೆ ಮತ್ತು ಕಬಡ್ಡಿ ಆಟಗಾರಿಗೆ ಪ್ರೋತ್ಸಾಹ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಸುಳ್ಯದ ಚೆನ್ನಕೇಶವ ದೇವಸ್ಥಾನದ ಸಮೀಪದ ಪ್ರಭು ಮೈದಾನದಲ್ಲಿ ವಿಶೇಷವಾಗಿ ತಯಾರಿಸಲಾದ

ಇಂಡೋರ್ ಸ್ಟೇಡಿಯಂನ ಮ್ಯಾಟ್ ಅಂಕಣದಲ್ಲಿ ನಡೆಯುತ್ತಿರುವ
3 ದಿನಗಳ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ನ ಎರಡನೇ ದಿನದ ಸಭಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶಾಸಕಿ ಭಾಗೀರಥಿ ಮುರುಳ್ಯ, ಮಾಜಿ ಸಚಿವ ಎಸ್.ಅಂಗಾರ, ತೂಗುಸೇತುವೆಗಳ ಸರದಾರ ಗಿರೀಶ್ ಭಾರದ್ವಾಜ್, ಜಿ.ಪಂ.ಸದಸ್ಯ ಹರೀಶ್ ಕಂಜಿಪಿಲಿ, ತೆಕ್ಕಿಲ್ ಗ್ರಾಮೀಣಾಭಿ ಪ್ರತಿಷ್ಠಾನದ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್,ಸಜ್ಜನ ಪ್ರತಿಷ್ಠಾನದ ಡಾ.ಉಮ್ಮರ್ ಬೀಜದಕಟ್ಟೆ, ಎನ್.ಜಯಪ್ರಕಾಶ್ ರೈ, ನ.ಪಂ. ಮಾಜಿ ಅಧ್ಯಕ್ಷರಾದ ಎನ್.ಎ.ರಾಮಚಂದ್ರ ಸಂಶುದ್ದೀನ್ ಎಸ್, ಎಂ.ವೆಂಕಪ್ಪ ಗೌಡ, ಸುಳ್ಯ ವೃತ್ತ ನಿರೀಕ್ಷಕ ಮೋಹನ್ ಕೊಠಾರಿ, ಎಸ್ಐ ಈರಯ್ಯ ದೂಂತೂರು, ಜಯಪ್ತಕಾಶ್ ಕುಂಚಡ್ಕ,ಕೆ.ಎಂ.ಮುಸ್ತಫ, ಚಂದ್ರ ಕೋಲ್ಚಾರ್, ಸುಧಾಕರ ಕಾಮತ್, ನಾರಾಯಣ ಕೇಕಡ್ಕ, ಕಿರಣ್ ಬುಡ್ಲೆಗುತ್ತು, ಪಿ.ಎಸ್.ಗಂಗಾಧರ, ಮೂಸಾ ಕುಂಞಿ ಪೈಂಬೆಚ್ಚಾಲ್, ನ.ಪಂ. ಮುಖ್ಯಾಧಿಕಾರಿ ಸುಧಾಕರ್ ಎಂ.ಎಚ್., ಉದ್ಯಮಿಗಳಾದ ಪಿ.ಎ.ಮಹಮ್ಮದ್, ಆದಂ ಹಾಜಿ ಕಮ್ಮಾಡಿ, ಶಾಫಿ ಕುತ್ತಮೊಟ್ಟೆ ನವೀನ್ ಚಂದ್ರ ಬೆಂಗಳೂರು, ಕೆ.ಟಿ.ವಿಶ್ವನಾಥ, ಬೂಡು ರಾಧಾಕೃಷ್ಣ ರೈ, ಅಬೂಬಕ್ಕರ್ ಅಡ್ಕಾರ್, ರಾಜು ಪಂಡಿತ್, ಗೋಪಾಲಕೃಷ್ಣ ಕರೋಡಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಬಡ್ಡಿ ಸಂಘಟನಾ ಸಮಿತಿಯ ಅಧ್ಯಕ್ಷ ಸಂಶುದ್ದೀನ್ ಭಾರತ್ ಶಾಮಿಯಾನ, ಪದಾಧಿಕಾರಿಗಳಾದ ಜಿ.ಜಿ.ನಾಯಕ್, ಎಸ್.ಪಿ.ಲೋಕನಾಥ್, ಗುರುದತ್ ನಾಯಕ್,ರಾಜೇಶ್ ಎನ್.ಎಸ್, ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘದ ಅಧ್ಯಕ್ಷ ಶಿವಪ್ರಕಾಶ್ ಪದಾಧಿಕಾರಿಗಳಾದ ಜಿ.ಎ.ಮಹಮ್ಮದ್ ಕುಂಞಿ ಸಹನಾ, ಶಾಫಿ ಪ್ರಗತಿ, ಜಯಪ್ರಕಾಶ್, ಗಿರಿಧರ ಸ್ಕಂದ ಮತ್ತಿತರರು ಉಪಸ್ಥಿತರಿದ್ದರು. ಸಂಘಟನಾ ಸಮಿತಿಯ ಸಂಚಾಲಕ ರಾಜೇಶ್ ಎನ್.ಎಸ್. ಸ್ವಾಗತಿಸಿದರು







