ಸುಳ್ಯ:ಪ್ರೊ ಮಾದರಿಯ ರಾಷ್ಟ್ರೀಯ ಕಬಡ್ಡಿ ಪಂದ್ಯಾಟದಲ್ಲಿ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಪಂದ್ಯಾಟದ ಕೊನೆಯ ದಿನವಾದ ಇಂದು ಪುರುಷ ವಿಭಾಗದ ಕ್ವಾರ್ಟರ್ ಫೈನಲ್, ಸೆಮಿಫೈನಲ್, ಫೈನಲ್ ಸೇರಿ 7 ಪಂದ್ಯಗಳು ಹಾಗೂ ಮಹಿಳಾ ವಿಭಾಗದಲ್ಲಿ ಎರಡು ನಡೆಯಲಿದೆ. ಮೊದಲ ಕ್ವಾರ್ಟರ್ ಫೈನಲ್ನಲ್ಲಿ
ಬ್ಯಾಂಕ್ ಆಫ್ ಬರೋಡ ತಂಡ ಕಡಬ ಫ್ರೆಂಡ್ಸ್ ತಂಡವನ್ನು ಎದುರಿಸಲಿದೆ. ದ್ವಿತೀಯ ಕ್ವಾರ್ಟರ್ ಫೈನಲ್ನಲ್ಲಿ ಪೆರಿಯಾರ್ ಸ್ಪೋರ್ಟ್ಸ್ ತಂಡ ಆಳ್ವಾಸ್ ಮೂಡಬಿದ್ರೆ ತಂಡವನ್ನು ಎದುರಿಸಲಿದೆ. ಮೂರನೇ ಕ್ವಾರ್ಟರ್ ಫೈನಲ್ನಲ್ಲಿ ಏನೆಪೋಯ ಯೂನಿವರ್ಸಿಟಿ ತಂಡ, ದೊರೈಸಿಂಗಂ ತಂಡವನ್ನು ಎದುರಿಸಲಿದೆ. ಕೊನೆಯ ಕ್ವಾರ್ಟರ್ ಫೈನಲ್ನಲ್ಲಿ ವೆಲಾಲಗರ್ ಪಾಂಡಿಚೇರಿ ತಂಡ ಟಿಎಂಸಿ ಥಾಣೆ ತಂಡವನ್ನು ಎದುರಿಸಲಿದೆ. ಮಹಿಳಾ ವಿಭಾಗದಲ್ಲಿ ಪಾಂಡಿಚೇರಿ ಮತ್ತು ಕನ್ಯಾಕುಮಾರಿ ತಂಡಗಳ ನಡುವೆ ಮತ್ತು ನ್ಯಾಷನಲ್ಸ್ ಬೆಂಗಳೂರು ಮತ್ರು ಟಿಎಂಸಿ ಥಾಣೆ ತಂಡಗಳ ಮಧ್ಯೆ ಪಂದ್ಯ ನಡೆಯಲಿದೆ.








