ಸುಳ್ಯ:ಕೆವಿಜಿ ಸುಳ್ಯ ಹಬ್ಬ ಕ್ರೀಡಾ ಸಮಿತಿ ಇದರ ಪ್ರಾಯೋಜಕತ್ವದಲ್ಲಿ ತಾಲೂಕು ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸುಳ್ಯ ಇದರ ಸಹಯೋಗದೊಂದಿಗೆ ಸುಳ್ಯ ವಿಧಾನಸಭಾ ಕ್ಷೇತ್ರದ ಪುರುಷರ ಹಾಗೂ ಮಹಿಳೆಯರ ಕಬಡ್ಡಿ ಚಾಂಪಿಯನ್ಶಿಪ್ ಡಿ.25ರಂದು ಶ್ರೀ ಚನ್ನಕೇಶವ ದೇವಸ್ಥಾನದ ಬಳಿಯ ಮೈದಾನದಲ್ಲಿ ನಡೆಯಲಿದೆ. ತಂಡಗಳ
ಆಟಗಾರರು ಒಂದೇ ಗ್ರಾಮಕ್ಕೆ ಒಳಪಟ್ಟಿರಬೇಕು. ತಂಡದ ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಡಿ.20. ನೋಂದಾವಣೆ ಮತ್ತು ಮಾಹಿತಿಗಾಗಿ ಮಾಧವ ಗೌಡ ಬೇರ್ಯ 9449471718
ಉಮೇಶ ಪಂಜದ ಬೈಲು 9481147591 ಅವರನ್ನು ಸಂಪರ್ಕಿಸಬಹುದು ಎಂದು ಕೆವಿಜಿ ಸುಳ್ಯ ಹಬ್ಬ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಟಿ.ವಿಶ್ವನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.













