ಚಿತ್ರಗಳು:ಪ್ರಕಾಶ್ ಸುಬ್ರಹ್ಮಣ್ಯ.
ಸುಬ್ರಹ್ಮಣ್ಯ: ಭಾರತ ಕ್ರಿಕೆಡ್ ತಂಡದ ಬ್ಯಾಟರ್ ಹಾಗು ವಿಕೆಟ್ ಕೀಪರ್ ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಬುಧವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಭೇಟಿ ನೀಡಿದರು. ಮಧ್ಯಾಹ್ಮ ಕ್ಷೇತ್ರಕ್ಕೆ ಭೇಟಿ ನೀಡಿದ ಕೆ.ಎಲ್.ರಾಹುಲ್ ಶ್ರೀ ಸುಬ್ರಹ್ಮಣ್ಯ ದೇವರ ದರ್ಶನ ಪಡೆದು

ಪ್ರಸಾದ ಸ್ವೀಕರಿಸಿದರು. ಮಹಾ ಪೂಜೆ ವೀಕ್ಷಿಸಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಹೊಸಳಿಗಮ್ಮನ ದರ್ಶನ ಪಡೆದು ಪ್ರಸಾದ ಸ್ವೀಕರಿಸಿದರು. ದೇವಳದ ವತಿಯಿಂದ ಕೆ.ಎಲ್.ರಾಹುಲ್ ಅವರನ್ನು ಗೌರವಿಸಲಾಯಿತು. ಸ್ನೇಹಿತರ ಜೊತೆಗೆ ಕೆ.ಎಲ್.ರಾಹುಲ್ ಕುಕ್ಕೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ದೇವಳದ ಅಧಿಕಾರಿಗಳು, ಸಿಬ್ಬಂದಿಗಳು ಅವರನ್ನು ಸ್ವಾಗತಿಸಿ, ಸನ್ಮಾನಿಸಿದರು. ಅಭಿಮಾನಿಗಳು ರಾಹುಲ್ ಜೊತೆ ಫೊಟೊ ಕ್ಲಿಕ್ಕಿಸಿಕೊಂಡರು.










