ಸುಳ್ಯ: ಲೋಕಸಭಾ ಚುನಾವಣೆಗೆ ದ. ಕ ಜಿಲ್ಲಾ ಕಾಂಗ್ರೆಸ್ನಿಂದ ಸುಳ್ಯ ವಿಧಾನ ಸಭಾ ವೀಕ್ಷಕರಾಗಿ ದ. ಕ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿರುವ ಎನ್ ಜಯಪ್ರಕಾಶ್ ರೈ ಯವರನ್ನು ನೇಮಕಗೊಳಿಸಿ ಆದೇಶ
ಮಾಡಲಾಗಿದೆ. ಇವರು ಸುಳ್ಯ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾಗಿ ಸುಳ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಘಟನಾತ್ಮಕವಾಗಿ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಜಯಪ್ರಕಾಶ್ ರೈ ಯವರಿಗೆ ಸುಳ್ಯ ಕ್ಷೇತ್ರದ ವೀಕ್ಷಕರಾಗಿ ನೇಮಕಗೊಳಿಸಿರುವ ಜಿಲ್ಲಾ ಕಾಂಗ್ರೆಸ್ ಸುಳ್ಯದಲ್ಲಿ ಲೋಕಸಭಾ ಅಭ್ಯರ್ಥಿಯ ಗೆಲುವಿಗೆ ಪಕ್ಷವನ್ನು ಸಂಘಟಿಸಲು ಜವಾಬ್ದಾರಿ ನೀಡಿದ್ದಾರೆ ಎಂದು ತಿಳಿದುಬಂದಿದೆ.









