ಬೆಳ್ಳಾರೆ: ಭಾರತ ಸರ್ಕಾರದ ನಿರುದ್ಯೋಗ ನಿರ್ಮೂಲನ ಏಜೆನ್ಸಿ ಭಾರತ್ ಸೇವಕ್ ಸಮಾಜದ ಅಂಗೀಕೃತ ಸಂಸ್ಥೆ ಯಾದ ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯ 2023-24ನೇಸಾಲಿನ
ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿಯ ಪ್ರಾರಂಭೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯಲ್ಲಿ ದಾಖಲಾತಿ ಪಡೆದ ವಿದ್ಯಾರ್ಥಿ ಶಿಕ್ಷಕಿಯರುಗಳಿಗೆ ಕೋರ್ಸ್ ಕಿಟ್ ವಿತರಣೆ ಮಾಡಲಾಯಿತು. ಸುಳ್ಯದ ರೋಟರಿ ಆಂಗ್ಲಮಾಧ್ಯಮ ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಅಚ್ಚುತ್ತ ಅಟ್ಲೂರು 2023-24ನೇ ಸಾಲಿನ ಶಿಕ್ಷಕಿಯರ ತರಬೇತಿಯನ್ನು ಉದ್ಘಾಟಿಸಿ ಶುಭಹಾರೈಸಿದರು. ಮೊಂಟೆಸ್ಸರಿ ತರಬೇತಿ ಶಿಕ್ಷಕಿ ಗೀತಾ ಬಾಲಚಂದ್ರ ಕೋರ್ಸ್ ಕಿಟ್ ವಿತರಿಸಿದರು. ಸಂಸ್ಥೆಯ ನಿರ್ದೇಶಕ ಉಮೇಶ್ ಮಣಿಕ್ಕಾರ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಗಣೇಶ್ ನಾಯಕ್ ಪುತ್ತೂರು ಕಾರ್ಯಕ್ರಮ ನಿರ್ವಹಿಸಿದರು.