ಬೆಳ್ಳಾರೆ: ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ ಇಲ್ಲಿಯ ಶಾಲಾ ಪ್ರಾರಂಭೋತ್ಸವವು ಜೂ. 1ರಂದು ನಡೆಯಿತು. ಮುಂಜಾನೆ ಶಾಲಾ ಸಮಯಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಶಾಲಾ ಸಂಚಾಲಕರಾದ ಎಂ.ಪಿ. ಉಮೇಶ್, ಪ್ರಾಂಶುಪಾಲರಾದ ಟಿ.ಎಮ್. ದೇಚಮ್ಮ ಹಾಗೂ
ಶಿಕ್ಷಕ ಶಿಕ್ಷಕೇತರ ಸಿಬ್ಬಂದಿಗಳು ಸಂತಸದಿಂದ ಬರಮಾಡಿಕೊಂಡರು. ಬಳಿಕ ಶಾಲಾ ಅಸೆಂಬ್ಲಿಯನ್ನು ಹಮ್ಮಿಕೊಳ್ಳಲಾಯಿತು.
ಪ್ರಾಂಶುಪಾಲರು ಮಾತನಾಡಿ, ರಜಾ ದಿನಗಳನ್ನು ಸದುಪಯೋಗಿಸಿ ಮರಳಿ ಶಾಲೆಗೆ ಬಂದ ಮಕ್ಕಳಿಗೆ ಶೈಕ್ಷಣಿಕ ಸಾಲಿನ ಕಲಿಕೆಗೆ ಉತ್ತೇಜನ ನೀಡಿ ಹಿತವಚನ ನುಡಿದರು. ಶಿಕ್ಷಕರು ವರ್ಣರಂಜಿತ ಸ್ವಾಗತ ಬೋರ್ಡ್ಗಳನ್ನು ರಚಿಸಿ ವಿದ್ಯಾರ್ಥಿಗಳನ್ನು ಸ್ವಾಗತಿಸಿದರು. ಆಯಾ ತರಗತಿಗಳಲ್ಲಿ ವಿವಿಧ ಚಟುವಟಿಕೆಗಳನ್ನು ನಡೆಸಿದರು. ಶಾಲಾ ಸಂಚಾಲಕರು ಸಿಹಿ ಹಂಚಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.