ಬೆಂಗಳೂರು: ಜಲ ಜೀವನ್ ಮೆಷಿನ್ ಅಡಿಯಲ್ಲಿ ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಯೋಜನೆಯ ಪ್ರಗತಿ ಬಗ್ಗೆ ಯುನಿಸೆಫ್ ಸಂಸ್ಥೆಯ ಸಹಯೋಗದಲ್ಲಿ ಐ. ಐ. ಎಂ. ಬಿ , ಸಂಸ್ಥೆ ಬೆಂಗಳೂರು ನಲ್ಲಿ ರಾಜ್ಯ ಮಟ್ಟದ 2 ದಿನಗಳ ಕಾರ್ಯಗಾರ ನಡೆಯಿತು. ವಿವಿಧ ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಸೇರಿ
60 ಜನ ಭಾಗವಹಿಸಿದ್ದರು. ಕುಡಿಯುವ ನೀರಿನ ಸಾಧಕ ಬಾದಕ ಬಗ್ಗೆ ಆಯ್ದ 5 ಜಿಲ್ಲೆಯ ಅಧಿಕಾರಿಗಳು ಜನಪ್ರತಿನಿಧಿಗಳು ಯುನಿಸೆಫ್ ಅಧಿಕಾರಿಗಳು ನೇತೃತ್ವದಲ್ಲಿ ಪ್ಯಾನಲ್ ಚರ್ಚೆ ನಡೆಯಿತು. ಕಾರ್ಯಾಗಾರದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಪ್ರತಿನಿಧಿಯಾಗಿ ಸಂಪಾಜೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ. ಹಮೀದ್ ಗೂನಡ್ಕ ಭಾಗವಹಿಸಿದ್ದರು. ಎಲ್ಲಾ ಪಂಚಾಯತ್ನ ಈಗಿರುವ ಎಲ್ಲಾ ಕರೆಂಟ್ ಬಿಲ್ ಒಂದು ಹಂತದಲ್ಲಿ ಸರಕಾರ ಪಾವತಿಸಬೇಕು, ಈಗಾಗಲೇ ಪಂಚಾಯತ್ಗಳಲ್ಲಿ ಜಲ ಜೀವನ್ ಕುಡಿಯುವ ನೀರು ಅನುಷ್ಠಾನ ಹೆಚ್ಡಿಪಿ ಪೈಪ್ ಅಳವಡಿಸುವುದರಿಂದ ಪ್ರತೀ ಪಂಚಾಯತ್ಗಳಿಗೆ ಪೈಪ್ ಜಾಯಿಂಟ್ ಮೆಷಿನ್ ಕೊಡಬೇಕು, ಕರೆಂಟ್ ಬಳಕೆಗೆ ಕುಡಿಯುವ ನೀರಿಗೆ ಕೃಷಿ ಪಂಪ್ ಗಳಿಗೆ ಇರುವ ದರ ನಿಗದಿಪಡಿಸಬೇಕು, ನಲ್ ಜಲ್ ಮಿತ್ರ ಮಹಿಳೆಯರಿಗೆ ಮಾತ್ರ ಇದ್ದು ಪುರುಷರಿಗೆ ತರಬೇತಿಗೆ ಅವಕಾಶ ಕೊಡಬೇಕು, ಉದ್ಯೋಗ ಖಾತ್ರಿ ಯೋಜನೆಯಡಿ ಹಲವು ಕಾಮಗಾರಿ ಕುಡಿಯುವ ನೀರಿಗೆ ಪೂರಕ ಕಾಮಗಾರಿ ಆಗಿದ್ದು ಸರಳ ಕಾನೂನು ರೂಪಿಸಲು ಅವಕಾಶ ಕಲ್ಪಿಸಬೇಕು ಸೇರಿ ವಿವಿಧ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಚರ್ಚೆಯಲ್ಲಿ ರಾಜ್ಯ ಮಟ್ಟದ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿದ್ದರು.