ಬೆಳ್ಳಾರೆ:ಸಮಸ್ತ ಕೇಂದ್ರ ಜಂಯ್ಯತ್ತುಲ್ ಉಲಮಾ ಅಧ್ಯಕ್ಷ ಸಯ್ಯದುಲ್ ಉಲಮಾ ಜಿಫ್ರಿ ಮುತ್ತುಕೋಯ ತಂಙಳ್ ಅವರು ಬೆಳ್ಳಾರೆ ಮಸೀದಿಗೆ ಭೇಟಿ ನೀಡಿದರು.ಹಝ್ರತ್ ವಲಿಯುಲ್ಲಾಹಿ ಬೆಳ್ಳಾರೆ ಮಖಾಂ ಉರೂಸ್
ಸಮಾರೋಪ ಸಮಾರಂಭದಲ್ಲಿ ಅವರು ದುವಾಶಿರ್ವಚನ ನಡೆಸಿಕೊಡಬೇಕಿತ್ತು.ಅದೇ ದಿನ ಬೆಂಗಳೂರಿನಲ್ಲಿ ಸಮಸ್ತ ನೂರನೇ ವಾರ್ಷಿಕ ಕಾರ್ಯಕ್ರಮದ ಚಾಲನಾ ಸಮಾವೇಶದ ಉದ್ಘಾಟನೆ ಸಮಾರಂಭ ಇದ್ದ ಕಾರಣ ಬೆಳ್ಳಾರೆ ಸಮಾರೋಪ ಸಮಾರಂಭಕ್ಕೆ
ಆಗಮಿಸಿರಲಿಲ್ಲ. ಆದರಿಂದ ಫೆ.3 ರಂದು ಬೆಳ್ಳಾರೆ ಜುಮ್ಮಾ ಮಸೀದಿಗೆ ಅಗಮಿಸಿ ಮಖಾಂ ಝಿಯಾರತ್ ಮಾಡಿ ದುವಾಶಿರ್ವಚನ ಮಾಡಿದರು.
ಈ ಸಂದರ್ಭದಲ್ಲಿ ತಂಙಳ್ ರವರನ್ನು ಜಮಾಯತ್ ಆಡಳಿತ ಸಮಿತಿ ಹಾಗೂ ಉರೂಸ್ ಸಮಿತಿ ಸನ್ಮಾನಿಸಿ ಗೌರವಿಸಿದರು.
ಬೆಳ್ಳಾರೆ ಝಕರಿಯ ಜುಮ್ಮಾ ಮಸೀದಿ ಖತೀಬರಾದ ಮಹಮ್ಮದ್ ನವವಿ ಮುಂಡೋಳೆ ಸ್ವಾಗತಿಸಿದರು.

ಝಕರಿಯ ಜುಮ್ಮಾ ಮಸೀದಿ ಆಡಳಿತ ಸಮಿತಿ ಅಧ್ಯಕ್ಷ ಯು ಹೆಚ್ ಅಬೂಭಕ್ಕರ್ ಹಾಜಿ ಉರೂಸ್ ಸಮಿತಿ ಅಧ್ಯಕ್ಷ ಅಬ್ದುಲ್ ಖಾದರ್ ಹಾಜಿ ಬಾಯಂಬಾಡಿ ಝಕರಿಯ ಜುಮ್ಮಾ ಮಸೀದಿ ಆಡಳಿತ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಕಲ್ಲಪಣೆ, ಕೋಶಾಧಿಕಾರಿ ,ಉರೂಸ್ ಸಮಿತಿ ಉಪಾಧ್ಯಕ್ಷ ಜಮಾಲುದ್ದೀನ್.ಕೆ.ಎಸ್, ಜುಮ್ಮಾ ಮಸೀದಿ ಆಡಳಿತ ಸಮಿತಿ ನಿರ್ದೇಶಕರಾದ ಬಶೀರ್. ಕೆ.ಎ, ಇಸ್ಮಾಯಿಲ್ ಬಿ,ಹಸೈನಾರ್. ಬಿ,ಹನೀಫ್ ನೆಟ್ಟಾರು,ಹಮೀದ್ ಹೆಚ್ ಎಂ,ಹಮೀದ್ ಅಲ್ಪಾ, ಉಸ್ಮಾನ್ ಹಾಜಿ,ಅಜರುದ್ದೀನ್ ಬೆಳ್ಳಾರೆ,ಬೆಳ್ಳಾರೆ ಹಿರಿಯ ಉದ್ಯಮಿ ಹಾಜಿ ಮಮ್ಮಾಲಿ ಹಾಜಿ ಎಸ್ಕೆಎಸ್ ಎಸ್ ಎಫ಼್ ಅಧ್ಯಕ್ಷರಾದ ಅಬ್ದುಲ್ ಜಮಾಲ್ ಅಜ಼ೀಜ್ ಮಾಸ್ತಿಕಟ್ಟೆ, ಸೈಪುದ್ದೀನ್ ನೆಟ್ಟಾರ್ ಮೊದಲಾದವರು ಉಪಸ್ಥಿತರಿದರು.









