ಸುಳ್ಯ: ಯುವ ಜನತಾದಳ(ಜಾ) ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಮುಖ ಪಧಾದಿಕಾರಿಗಳ ಸಭೆ ನಡೆಯಿತು. ತಾಲೂಕು ಯುವ ಜನತಾದಳ ಅಧ್ಯಕ್ಷ ಮೋಹನ್ ಕೊಲ್ಲಮೊಗ್ರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಮಾತನಾಡಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ಪಕ್ಷದತ್ತ
ಆಕರ್ಷಿಸಿ ಸದಸ್ಯತ್ವ ಅಭಿಯಾನದ ಮುಖಾಂತರ ಪಕ್ಷ ಸಂಘಟನೆಯನ್ನು ಇನ್ನಷ್ಟು ಗಟ್ಟಿಗೊಳಿಸಬೇಕು.ತಾಲೂಕು ಹಾಗು ಗ್ರಾಮ ವ್ಯಾಪ್ತಿಯ ಪಧಾದಿಕಾರಿಗಳು ಇನ್ನಷ್ಟು ಸಕ್ರೀಯರಾಗಬೇಕು ಎಂದು ಹೇಳಿದರು.
ಸಭೆಯಲ್ಲಿ ಜಿಲ್ಲಾ ಸಂಘಟನಾ ಉಸ್ತುವಾರಿ ರತೀಶ್ ಕರ್ಕೇರ, ಹನೀಫ್ ಮೊಟ್ಟೆಂಗಾರ್, ಪದ್ಮನಾಭ ಪರ್ಲಡ್ಕ , ಸತೀಶ್ ಕಾಂತಮಂಗಲ, ಸುನಿಲ್ ಕಾಂತಮಂಗಲ, ಶಶಿಧರ, ದಯಾನಂದ, ಪ್ರತೀಕ್ ದೇರಪ್ಪಜ್ಜನಮನೆ, ಜಗದೀಶ್ ಸುಳ್ಯ, ನಿತೀಶ್, ವಿನಿತ್, ನಿಶಾಂತ್, ಜೈದೀಪ್ ಹಾಗು ಇತರರು ಉಪಸ್ಥಿತರಿದ್ದರು.ಯುವ ತಾಲೂಕು ಅಧ್ಯಕ್ಷ ಮೋಹನ್ ಕೊಲ್ಲಮೊಗ್ರ ಇವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತಾನಾಡಿದರು. ಯುವ ಜನತಾದಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಚಿಮ್ಟಿಕಲ್ಲು ವಂದಿಸಿದರು.