ಸುಳ್ಯ:ಜಾತ್ಯಾತೀತ ಜನತಾ ದಳ(ಜೆಡಿಎಸ್) ರಜತ ಮಹೋತ್ಸವ ಸಂಭ್ರಮದಲ್ಲಿ ದ. ಕ. ಜಿಲ್ಲಾ ಜನತಾದಳದ ಪ್ರಮುಖರು ಭಾಗಿಯಾದರು.
1999 ನವೆಂಬರ್ನಲ್ಲಿ ಸ್ಥಾಪನೆಯಾದ ಜಾತ್ಯತೀತ ಜನತಾದಳ ಪಕ್ಷ ಕ್ಕೆ 25 ವರ್ಷ ತುಂಬಿದ ಹಿನ್ನಲೆ ಯಲ್ಲಿ ಬೆಂಗಳೂರಿನ ಜೆ. ಪಿ. ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ
ಜೆಡಿಎಸ್ ದ.ಕ. ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ, ಸುಳ್ಯ ತಾಲೂಕು ಅಧ್ಯಕ್ಷ ಸುಕುಮಾರ್ ಕೋಡ್ತುಗುಳಿ, ಪ್ರಧಾನ ಕಾರ್ಯದರ್ಶಿ ರಾಕೇಶ್ ಕುಂಟಿಕಾನ, ಕಡಬ ತಾಲೂಕು ಅಧ್ಯಕ್ಷ ಸೆಯ್ಯದ್ ಮೀರಾಸಾಹೇಬ್, ಬೆಳ್ತಂಗಡಿ ತಾಲೂಕು ಅಧ್ಯಕ್ಷ ಪ್ರವೀಣ್ ಚಂದ್ರ ಜೈ ನ್,ಅಬ್ದುಲ್ ರಹೀಮ್ ಹಳೆಗೇಟು, ಜಾಫರ್ ಶರೀಫ್ ಕಾಣಿಯೂರು, ರಾಜ್ಯ ಸಂಘಟನಾ ಕಾರ್ಯದರ್ಶಿ ಷಾ ಜಮೀರ್, ರಾಜ್ಯ ಮೀನುಗಾರಿಕಾ ಘಟಕ ಅಧ್ಯಕ್ಷ ರತ್ನಾಕರ ಸುವರ್ಣ, ಉಪಾಧ್ಯಕ್ಷ ರಾಘವೇಂದ್ರ ಮತ್ತಿತರರು ಭಾಗವಹಿಸಿದ್ದರು.





