ಸುಳ್ಯ:ಜನತಾದಳ (ಜಾತ್ಯತೀತ) ಪಕ್ಷದ 2024-26 ಸಾಲಿನ ಸಾಂಸ್ಥಿಕ ಚುನಾವಣೆಯ ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿಯಾಗಿ ರಾಕೇಶ್ ಕುಂಟಿಕಾನ ರವರು ನೇಮಕ ಗೊಂಡಿದ್ದಾರೆ.ಪಕ್ಷದ ಜಿಲ್ಲಾ ಅಧ್ಯಕ್ಷರಾದ ಜಾಕೆ ಮಾಧವ ಗೌಡರವರ ಶಿಫಾರಸ್ಸಿನ ಮೇರೆಗೆ ಜೆ ಡಿ ಎಸ್ ರಾಜ್ಯ ಚುನಾವಣಾಧಿಕಾರಿ ಕೆ.ಎ.ತಿಪ್ಪೇಸ್ವಾಮಿ ಅವರು ಆದೇಶ ನೀಡಿದ್ದಾರೆ. ರಾಕೇಶ್ ಕುಂಟಿಕಾನ ಅವರು ಪ್ರಸ್ತುತ ಸುಳ್ಯ ತಾಲೂಕು ಜೆ ಡಿ ಎಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.
ದಿ ಸುಳ್ಯ ಮಿರರ್ ಸುದ್ದಿಜಾಲ
ದಿ ಸುಳ್ಯ ಮಿರರ್ ಸುದ್ದಿಜಾಲ. ಇದು ನಿಮ್ಮೂರಿನ ಪ್ರತಿಬಿಂಬ. ನಮಗೆ ನ್ಯೂಸ್ ಕಳುಹಿಸಲು thesulliamirror@gmail.com ಗೆ ಇಮೇಲ್ ಮಾಡಿರಿ.
previous post