ಸುಳ್ಯ:ಜೆಸಿಐ ಸುಳ್ಯ ಪಯಸ್ವಿನಿ ಇದರ 2026 ನೇ ಸಾಲಿನ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ, ಕಾರ್ಯದರ್ಶಿ ತಾರಾ ಮಾಧವ ಚೂಂತಾರು, ಕೋಶಾಧಿಕಾರಿ ಪ್ರಸನ್ನ ಎಂ.ಆರ್. ತಂಡದ ಪದಗ್ರಹಣ ಸಮಾರಂಭ ಸುಳ್ಯ ಅರಂಬೂರು ಗ್ರ್ಯಾಂಡ್ ರಸಪಾಕ ಹೋಟೆಲ್ ಸಭಾಂಗಣದಲ್ಲಿ ನಡೆಯಿತು.ವಲಯ 15ರ
ಉಪಾಧ್ಯಕ್ಷ ಜಿತೇಶ್ ಪೆರೇರಾ ಪದಪ್ರದಾನ ನೆರವೇರಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಉದ್ಘಾಟಿಸಿದರು.ಮುಖ್ಯ ಅತಿಥಿಗಳಾಗಿ ವಲಯ 15ರ ವಲಯಾಧ್ಯಕ್ಷ ಅಭಿಲಾಷ್ ಬಿ.ಎ., ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಭಾಗವಹಿಸಿದ್ದರು.ಜೆಸಿಐ ಸುಳ್ಯ ಪಯಸ್ವಿನಿ ನಿರ್ಗಮನ ಅಧ್ಯಕ್ಷ ಸುರೇಶ್ ಕಾಮತ್, ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಜಯಪ್ರಕಾಶ್ ಕಾನತ್ತಿಲ, ಕಾರ್ಯಕ್ರಮ ಸಂಯೋಜಕ ರವಿಕುಮಾರ್ ಅಕ್ಕೋಜಿಪಾಲ್ ವೇದಿಕೆಯಲ್ಲಿ ಇದ್ದರು.
ಜತೆ ಕಾರ್ಯದರ್ಶಿ ವಿನೋದ್ ಮೂಡಗದ್ದೆ ಜೇಸಿ ವಾಣಿ ವಾಚಿಸಿದರು. ಪೂರ್ವಾಧ್ಯಕ್ಷ ಅಶೋಕ್ ಚೂಂತಾರು, ಪ್ರಸನ್ನ ಎಂ.ಆರ್, ಗುರುಪ್ರಸಾದ್ ನಾಯಕ್, ನವೀನ್ ಕುಮಾರ್ ಅಜ್ಜಾವರ ಉಮೇಶ್ ಬೊಳುಗಲ್ಲು, ರಮ್ಯಾ ರಂಜಿತ್, ಶೋಭಾ ಚೂಂತಾರು, ಸುನಿತಾ ರವಿಕುಮಾರ್
ಪದಾಧಿಕಾರಿಗಳು ಹಾಗೂ ಅತಿಥಿಗಳನ್ನು ಪರಿಚಯಿಸಿದರು.












