ಸುಳ್ಯ:ಜೆಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯ ಉಪಾಧ್ಯಕ್ಷ ಜಿತೇಶ್ ಪಿರೇರಾ ಭೇಟಿ ನೀಡಿದರು.ಸುಳ್ಯದ ಕಾನತ್ತಿಲ ದೇವಮ್ಮ ಕಾಂಪ್ಲೆಕ್ಸ್ನಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆಯನ್ನು ಜೆಸಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೊಂಟಡ್ಕ ವಹಿಸಿದ್ದರು.ವೇದಿಕೆಯಲ್ಲಿ
ನಿಕಟಪೂರ್ವಾಧ್ಯಕ್ಷ ಸುರೇಶ್ ಕಾಮತ್, ವಲಯ ಉಪಾಧ್ಯಕ್ಷ ಜಿತೇಶ್ ಪಿರೇರಾ, ಮುಖ್ಯ ಅತಿಥಿಗಳಾಗಿ ಪಯಸ್ವಿನಿ ಸೀನಿಯರ್ ಛೆಂಬರ್ ಇಂಟರ್ ನ್ಯಾಶನಲ್ ಅಧ್ಯಕ್ಷ ಜಯಪ್ರಕಾಶ್ ಕೆ. , ಕಾರ್ಯದರ್ಶಿ ತಾರ ಮಾಧವ ಚೂoತಾರು ಉಪಸ್ಥಿತರಿದ್ದರು.
ಸಾಮಾನ್ಯ ಸಭೆಯಲ್ಲಿ ಘಟಕದಲ್ಲಿ ಕೈಗೊಂಡ ನಿರ್ಣಯಗಳು ಹಾಗೂ ಘಟಕದ ಕಾರ್ಯಚಟುವಟಿಕೆಗಳನ್ನು ಕಾರ್ಯದರ್ಶಿ ಸಭೆಗೆ ಮಂಡಿಸಿದರು. ಬಳಿಕ ಜಿತೇಶ್ ಪಿರೇರಾ ತರಬೇತಿ ಕಾರ್ಯಗಾರವನ್ನು ನಡೆಸಿಕೊಟ್ಟರು.ಈ ಸಂದರ್ಭದಲ್ಲಿ ಪೂರ್ವ ವಲಯಾಧ್ಯಕ್ಷ ಅಶೋಕ್ ಚೂoತಾರ್, ದೇವರಾಜ್ ಕುದ್ಪಾಜೆ, ನವೀನಕುಮಾರ್, ರವಿಕುಮಾರ್, ಸುಪ್ರೀತ್ ಮೋಂಟಡ್ಕ, ಶಂಕರ್ ಪೆರಾಜೆ,ಜಯಲಕ್ಷ್ಮಿ, ಲೀಲಾವತಿ, ರಂಜಿತ್ ಪೂಜಾರಿ, ಕೇಶವ, ಮಹೇಶ್ ಬೆಳ್ಳಾರ್ಕರ್, ಮಂಜುನಾಥ್, ಅಶೋಕ್ ಅಡ್ಕಾರ್, ಮೊದಲದವರು ಉಪಸ್ಥಿತರಿದ್ದರು. ಶೋಭಾ ಅಶೋಕ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಸುನಿತಾ ರವಿಕುಮಾರ್ ಜೇಸಿವಾಣಿ ವಾಚಿಸಿದರು, ವಿನೋದ್ ಮೂಡಗದ್ದೆ ವಲಯ ಉಪಾಧ್ಯಕ್ಷನ್ನು ಸಭೆಗೆ ಪರಿಚಯಿಸಿದರು.









