ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ ಜೆಸಿ ಸಪ್ತಾಹ 2024ರ ಅಂಗವಾಗಿ ಬಿ.ಸಿ.ಎಂ ಹಾಸ್ಟೆಲ್ ಕುರುಂಜಿಭಾಗ್ ಇಲ್ಲಿನ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಮತ್ತು ತಪಾಸಣಾ ಶಿಬಿರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜೆಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಗುರುಪ್ರಸಾದ್ ನಾಯಕ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ
ಪೂರ್ವ ವಲಯಾದ್ಯಕ್ಷ ದೇವಿಪ್ರಸಾದ್ ಕುದ್ಪಾಜೆ ಭಾಗವಹಿಸಿ ಶುಭ ಹಾರೈಸಿದರು.ಸಂಪನ್ಮೂಲ ವ್ಯಕ್ತಿಯಾಗಿ ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜಿನ ದ್ರವ್ಯಗುಣ ವಿಭಾಗದ ಪ್ರೊಫೆಸರ್ ಡಾ. ವಿಜಯಲಕ್ಷ್ಮಿ ಪಿ. ಬಿ. ಭಾಗವಹಿಸಿ ಆರೋಗ್ಯದ ಬಗ್ಗೆ ಮಾಹಿತಿ ಹಾಗೂ ತಪಾಸಣಾ ಶಿಬಿರವನ್ನು ನಡೆಸಿ ಕೊಟ್ಟರು.
ವೇದಿಕೆಯಲ್ಲಿ ಜೇಸಿಐ ಪಯಸ್ವಿನಿಯ ನಿಕಟ ಪೂರ್ವ ಅಧ್ಯಕ್ಷ ನವೀನ್ ಕುಮಾರ್, ವಿದ್ಯಾರ್ಥಿನಿ ನಿಲಯದ ಮೇಲ್ವಿಚಾರಕಿ ಗೀತಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಕಾರ್ಯಕ್ರಮದಲ್ಲಿ ಜೇಸಿಐಯ ಪೂರ್ವಾದ್ಯಕ್ಷರುಗಳು, ಪದಾಧಿಕಾರಿಗಳು, ಹಾಸ್ಟೆಲ್ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜೇಸಿಐ ಸುಳ್ಯ ಪಯಸ್ವಿನಿಯ ಮಹಿಳಾ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿ, ಉಪಾಧ್ಯಕ್ಷೆ ತಾರ ಚೂಂತಾರು ಜೇಸಿವಾಣಿ ವಾಚಿಸಿ, ಸುರೇಶ್ ಕಾಮತ್ ವಂದಿಸಿದರು.