ಪಂಜ: ಜೇಸಿಐ ಪಂಜ ಪಂಚಶ್ರೀ ಇದರ ಬೆಳ್ಳಿ ಹಬ್ಬ-‘ರಜತ ರಶ್ಮಿ’ ಕಾರ್ಯಕ್ರಮದ ಸಮಾರೋಪ ಸಮಾರಂಭ ನ.12 ರಂದು ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಳದ ವಠಾರದಲ್ಲಿ ನಡೆಯಿತು.
ಕರ್ನಾಟಕ ಸರ್ಕಾರ, ವಿಶ್ರಾಂತ ಲೋಕಾಯುಕ್ತ ಸಂತೋಷ್ ಹೆಗ್ಡೆ ‘ಭವ್ಯ ಭಾರತದ ನಿರ್ಮಾಣದಲ್ಲಿ ಯುವ ಜನತೆ ಪಾತ್ರ’ ವಿಷಯದಲ್ಲಿ ದಿಕ್ಸೂಚಿ ಭಾಷಣ ಮಾಡಿದರು. ದೇಶ ಕಟ್ಟುವುದರಲ್ಲಿ ಮತ್ತು ಸ್ವಚ್ಛ ಸಮಾಜದ
ನಿರ್ಮಾಣದಲ್ಲಿ ಯುವ ಜನರ ಪಾತ್ರ ಮಹತ್ವವಾದುದು ಎಂದು ಅವರು ಹೇಳಿದರು. ಭ್ರಷ್ಟರನ್ನು ಸಮಾಜದಲ್ಲಿ ಬಹಿಷ್ಕರಿಸ ಬೇಕು. ಮನುಷ್ಯನಿಗೆ ತೃಪ್ತಿ ಇರಬೇಕು ದುರಾಸೆ ಬಿಡಬೇಕು. ಮಾನವೀಯ ಮೌಲ್ಯಗಳು ಇದ್ದಾಗ ಬದಲಾವಣೆ ಸಾಧ್ಯ. ಎಂದು ಅವರು ಹೇಳಿದರು.
ಪೂರ್ವ ವಲಯಾಧ್ಯಕ್ಷ ರಾಜೇಂದ್ರ ಭಟ್ ರಜತ ರಶ್ಮಿ-ಸಾಧನೆಯ ಹಾದಿಯಲ್ಲಿ ಬೆಳ್ಳಿ ಬೆಳಕು ವಿಷಯದಲ್ಲಿ ಸಮಾರೋಪ ಭಾಷಣ ಮಾಡಿದರು. ಶಿಸ್ತು ಬದ್ಧ, ಉತ್ತಮ ನಾಯಕರೊಂದಿಗೆ ಸಮಾಜಕ್ಕೆ ಅನೇಕ ಕೊಡುಗೆಗಳನ್ನು ನೀಡಿ ಜನರ ಪ್ರೀತಿಗಳಿಸಿ 25 ವರ್ಷಗಳನ್ನು ಪೂರೈಸಿದ ಜೇಸಿಐ ಪಂಜ ಪಂಚಶ್ರೀಯು ಅನೇಕ ಕೊಡುಗೆಗಳ ಮೂಲಕ ಸಾಮಾಜಿಕ ಬದ್ಧತೆಯಿಂದ ಕೆಲಸ ಮಾಡಿದೆ ಎಂದು ಹೇಳಿದರು.
ಜೇಸಿಐ ಪಂಜ ಪಂಚಶ್ರೀ ಅಧ್ಯಕ್ಷ ಶಿವಪ್ರಸಾದ್ ಹಾಲೆಮಜಲು ಅಧ್ಯಕ್ಷತೆ ವಹಿಸಿದ್ದರು.
ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷ ತೀರ್ಥಾನಂದ ಕೊಡೆಂಕಿರಿ ಯವರಿಗೆ ಕಮಲ ಪತ್ರ ಪುರಸ್ಕಾರ ನಡೆಯಿತು.
ವಲಯಾಧ್ಯಕ್ಷ ಜೇಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತ ಪುರಸ್ಕರಿಸಿದರು.ಪೂರ್ವ ವಲಯಾಧ್ಯಕ್ಷರಾದ ಚಂದ್ರಶೇಖರ ನಾಯರ್, ಅಶೋಕ್ ಚೂಂತಾರ್, ಚಂದ್ರಹಾಸ ರೈ, ಕೃಷ್ಣ ಮೋಹನ್, ಜೇಸಿಐ ಪಂಜ ಪಂಚಶ್ರೀ ಪೂರ್ವಾಧ್ಯಕ್ಷರಾದ ಶಶಿಧರ ಪಳಂಗಾಯ, ರಾಜೇಶ್ ರೈ, ಸಂತೋಷ್ ಜಾಕೆ, ಸೋಮಶೇಖರ ನೇರಳ, ಸುದರ್ಶನ ಪಟ್ಟಾಜೆ, ಗಣೇಶ್ ಪ್ರಸಾದ್ ನಾಯರ್,ಭರತ್ ನೆಕ್ರಾಜೆ, ರಾಜೇಶ್ ಕಂಬಳ,ಇಸ್ಮಾಯಿಲ್ ಪಡ್ಪಿನಂಗಡಿ, ದಯಪ್ರಸಾದ್ ಚೀಮುಳ್ಳು, ಜಯರಾಮ ಕಲ್ಲಾಜೆ, ಚಂದ್ರಶೇಖರ ಇಟ್ಯಡ್ಕ, ಚಂದ್ರಶೇಖರ ಕುಕ್ಕುಪುಣಿ, ಪುರುಷೋತ್ತಮ ದಂಬೆಕೋಡಿ, ಚೇತನ್ ತಂಟೆಪ್ಪಾಡಿ, ಗುರುಪ್ರಸಾದ್ ತೋಟ, ವಾಸುದೇವ ಮೇಲ್ಪಾಡಿ, ನಾಗ್ ಮಣಿ ಕೆದಿಲ ,ಬೆಳ್ಳಿ ಹಬ್ಬ ಸಮಿತಿಯ ಅಧ್ಯಕ್ಷ ಮತ್ತು ಘಟಕದ ಸ್ಥಾಪಕಾಧ್ಯಕ್ಷ ದೇವಿಪ್ರಸಾದ್ ಜಾಕೆ, ಬೆಳ್ಳಿ ಹಬ್ಬ ಸಮಿತಿಯ ಕಾರ್ಯದರ್ಶಿ ತೀರ್ಥಾನಂದ ಕೊಡೆಂಕಿರಿ, ಬೆಳ್ಳಿ ಹಬ್ಬ ಕಾರ್ಯಕ್ರಮ ನಿರ್ದೇಶಕ ಲೋಕೇಶ್ ಆಕ್ರಿಕಟ್ಟೆ, ಘಟಕದ ನಿಕಟ ಪೂರ್ವಾಧ್ಯಕ್ಷ ಗಣೇಶ್ ಪ್ರಸಾದ್ ಭೀಮಗುಳಿ, ಕಾರ್ಯದರ್ಶಿ ಕೌಶಿಕ್ ಕುಳ ವೇದಿಕೆಯಲ್ಲಿ .

ಉಪಸ್ಥಿತರಿದ್ದರು. ವಲಯಾಧ್ಯಕ್ಷ ಜೇಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತರವರನ್ನು,ಪೂರ್ವಾಧ್ಯಕ್ಷರುಗನ್ನು ಸನ್ಮಾನಿಸಿ ಗೌರವಿಸಲಾಯಿತು.ಇದೇ ವೇಳೆ ಘಟಕಕ್ಕೆ ವಲಯದ ಮತ್ತು ರಾಷ್ಟ್ರೀಯ ಪುರಸ್ಕಾರವನ್ನು ನೀಡಿದರು. ಯುವ ತೇಜಸ್ಸು ಟ್ರಸ್ಟ್ ಪಂಜ, ಶಾರದಾಂಬ ಭಜನಾ ಮಂಡಳಿ ಪಂಜ, ಪಂಚಶ್ರೀ ಪಂಜ ಸ್ಪೋರ್ಟ್ಸ್ ಕ್ಲಬ್ ಗಳಿಗೆ ಪುರಸ್ಕಾರ ನೀಡಲಾಯಿತು.
ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪಂಚಶ್ರೀ ವಿದ್ಯಾನಿಧಿ ವಿತರಣೆ ನಡೆಯಿತು.
ಕಾರ್ಯಕ್ರಮದಲ್ಲಿ ಜೀವನ್ ಶೆಟ್ಟಿ ಗದ್ದೆ ವೇದಿಕೆಗೆ ಆಹ್ವಾನಿಸಿದರು.ದುರ್ಗದಾಸ್ ಕಡ್ಲಾರು ಜೇಸಿ ವಾಣಿ ನುಡಿದರು. ಸವಿತಾರ ಮುಡೂರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಯರಾಮ ಕಲ್ಲಾಜೆ, ಗುರುಪ್ರಸಾದ್ ತೋಟ, ಶಶಿಧರ ಪಳಂಗಾಯ, ಚಂದ್ರಶೇಖರ ಇಟ್ಯಡ್ಕ, ಮಹೇಶ್ ಅಂಬೆಕಲ್ಲು, ಸೋಮಶೇಖರ ನೇರಳ ಅತಿಥಿಗಳ, ಪುರಸ್ಕೃತರ ಪರಿಚಯಿಸಿದರು.ಕೌಶಿಕ್ ಕುಳ ವಂದಿಸಿದರು.ಬಳಿಕ ಪ್ರತಿಷ್ಠಿತ ತಂಡಗಳ ಮುಕ್ತ ಡ್ಯಾನ್ಸ್ ಸ್ಪರ್ಧೆ ಸಿಲ್ವರ್ ಸ್ಟೆಪ್ಸ್ 2022 ನಡೆಯಿತು.