ಜಟ್ಟಿಪಳ್ಳ: ನೆಹರೂ ಯುವ ಕೇಂದ್ರ ಮಂಗಳೂರು, ಮಾನಸ ಮಹಿಳಾ ಮಂಡಳ ಜಟ್ಟಿಪಳ್ಳ,ಸಂಸ್ಥೆಯ ಬೆಳ್ಳಿ ಹಬ್ಬ ಆಚರಣಾ ಸಮಿತಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಯೋಗದಿಂದಾಗುವ ಆರೋಗ್ಯ ಮಾಹಿತಿ ಮತ್ತು
ಯೋಗ ಪ್ರಾತ್ಯಕ್ಷತೆಯು ಜಟ್ಟಿಪಳ್ಳದ ಯುವಸದನ ದಲ್ಲಿ ಜರುಗಿತು.ಡಾ.ಅನುಷಾ ಮಡಪ್ಪಾಡಿ ಸಂಪನ್ಮೂಲ ವ್ಯಕ್ತಿ ಯಾಗಿ ಆಗಮಿಸಿ ವಿವಿಧ ಯೋಗಾಸನ ಮತ್ತು ಪ್ರಾಣಯಾಮಗಳನ್ನು ತಿಳಿಸಿಕೊಟ್ಟರು.
ಮಹಿಳಾ ಮಂಡಳದ ಗೌರವಾಧ್ಯಕ್ಷೆ ಚಂದ್ರಾಕ್ಷಿ ಜೆ ರೈ ಸಭಾಧ್ಯಕ್ಷತೆ ವಹಿಸಿ ದ್ದರು. ನಗರ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಸರೋಜಿನಿ ಪೆಲತಡ್ಕ ದೀಪ ಬೆಳಗಿಸಿ ಉದ್ಘಾಟಿಸಿದರು..ಮಹಿಳಾ ಮಂಡಲದ ಅಧ್ಯಕ್ಷೆ ಚಿತ್ರಲೇಖ ಮಡಪ್ಪಾಡಿ ಸ್ವಾಗತಿಸಿದರು. ಜಯಂತಿ ರೈ ಪ್ರಾರ್ಥಿಸಿದರು. ಮಹಿಳಾ ಮಂಡಲದ ಉಪಾಧ್ಯಕ್ಷೆ ಶೈಲಜಾ ಶೆಟ್ಟಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸವಿತಾ ಲಕ್ಷ್ಮಣ್ ಕಾರ್ಯಕ್ರಮ ನಿರೂಪಿಸಿದರು. ಬೆಳ್ಳಿಹಬ್ಬ ದ ಪ್ರಧಾನ ಕಾರ್ಯದರ್ಶಿ ಸುನೀತ ರಾಮಚಂದ್ರ ವಂದಿಸಿದರು. ಕಾರ್ಯಕ್ರಮದಲ್ಲಿ ಮಹಿಳಾ ಮಂಡಲದ ಹೆಚ್ಚಿನ ಸದಸ್ಯರು ಬಾಗವಹಿಸಿದ್ದರು.