ಟೊಕಿಯೊ: ಜಪಾನ್ನಲ್ಲಿ ಮತ್ತೆ ತೀವ್ರ ಭೂಕಂಪ ಸಂಭವಿಸಿದೆ
ಜಪಾನ್ನ ಹೊನ್ಶು ದ್ವೀಪದ ಪಶ್ಚಿಮ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.ಭೂಕಂಪದ ಕೇಂದ್ರ ಬಿಂದು 46 ಕಿ.ಮೀ. ಆಳದಲ್ಲಿ ದಾಖಲಾಗಿದೆ. ತೀವ್ರ ಭೂಕಂಪವಾದರೂ ಸುನಾಮಿ ಭೀತಿ ಇಲ್ಲ ಎಂದು ತಿಳಿದು ಬಂದಿದೆ. ಜಪಾನ್ನಲ್ಲಿ ಹೊಸ ವರ್ಷದಂದು ಸಂಭವಿಸಿದ್ದ ಸರಣಿ ಭೂಕಂಪದಲ್ಲಿ ಭಾರಿ ಹಾನಿ ನಷ್ಟವಾಗಿತ್ತು.
previous post





