ದೋಹಾ: ಫಿಫಾ ವಿಶ್ವಕಪ್‌ನ ಗ್ರೂಪ್ ಇ ಪಂದ್ಯದಲ್ಲಿ ಮತ್ತೊಂದು ಅಚ್ಚರಿಯ ಫಲಿತಾಂಶ ದಾಖಲಾಗಿದೆ. ಜಪಾನ್ ತಂಡ ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿ ತಂಡವನ್ನು 2-1 ಅಂತರದಿಂದ ಸೋಲಿಸಿದೆ.
ಖಲೀಫ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ಬುಧವಾರ ನಡೆದ
ಪಂದ್ಯದಲ್ಲಿ ಜರ್ಮನಿ ತಂಡ ಈಲ್ಕೊ ಗುಂಡವಾನ್ 33ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದ ಗೋಲು ನೆರವಿನಿಂದ 1-0 ಮುನ್ನಡೆ ಸಾಧಿಸಿತು. 75ನೇ ನಿಮಿಷದಲ್ಲಿ ಗೋಲು ಗಳಿಸಿದ ಬದಲಿ ಆಟಗಾರ ರಿತ್ಸು ಡೊಯಾನ್, ಜಪಾನ್ 1-1ರಿಂದ ಸಮಬಲ ಸಾಧಿಸಲು ನೆರವಾದರು.83ನೇ ನಿಮಿಷದಲ್ಲಿ ಗೋಲು ಗಳಿಸಿದ ಟಕುಮಾ ಅಸಾನೊ ಜಪಾನ್ 2-1 ಮುನ್ನಡೆ ಸಾಧಿಸಿ ಪಂದ್ಯ ಗೆಲ್ಲಲು ಪ್ರಮುಖ ಪಾತ್ರವಹಿಸಿದರು.ಇದಕ್ಕೂ ಮೊದಲು ಅಲ್ ಬೈತ್ ಸ್ಟೇಡಿಯಂನಲ್ಲಿ ನಡೆದ ಮೊರಕ್ಕೊ ಮತ್ತು ಕ್ರೊಯೇಷಿಯಾ ನಡುವಿನ ಪಂದ್ಯ ಗೋಲು ರಹಿತ ಡ್ರಾದಲ್ಲಿ ಅಂತ್ಯ ಕಂಡಿತ್ತು.