ಸುಳ್ತ: ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ (ಜಾನುವಾರಿ ಸಾಗಾಣಿಕೆ) ನಿಯಮ 2021ರ ಅನ್ವಯ ಜಾನುವಾರು ಸಾಗಾಣಿಕಾ ಪರವಾನಗಿ ಪಡೆಯಲು ಇನ್ನು ಮುಂದೆ ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಅಧಿಕೃತ ಜಾನುವಾರು ಸಾಗಾಟ ಪರವಾನಗಿ ಜಾಲತಾಣದಿಂದ ರೈತರು ತಾವೇ ಅರ್ಜಿಗಳನ್ನು ಸಲ್ಲಿಸಿ ಕೆಲಸದ ದಿನಗಳಂದು ಪರವಾನಗಿ ಪಡೆದುಕೊಳ್ಳಬಹುದು ಎಂದು
ಪಶು ಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಪರವಾನಗಿ ಪಡೆಯಲು https://animaltrans.karahvs.in/ ಜಾಲತಾಣದಲ್ಲಿ ಜಾನುವಾರು ಮಾಲೀಕರು ಅಥವಾ ಸಾಗಾಟ ಮಾಡುವ ವಾಹನದ ಚಾಲಕರು ಅರ್ಜಿ ಸಲ್ಲಿಸಿ, ಪರವಾನಗಿ ಪಡೆಯಬಹುದು. ಪರವಾನಗಿ ಪಡೆಯಲು ಈ ಕೆಳಗಿನ ದಾಖಲಾತಿಗಳೊಂದಿಗೆ “ಗ್ರಾಮ ಒನ್” (GRAMA ONE) ಅಥವಾ “ಸಾಮಾನ್ಯ ಸೇವಾ ಕೇಂದ್ರ” (COMMON SERVICE CENTER) ಗಳಲ್ಲಿ ನಿಗದಿತ ಶುಲ್ಕವನ್ನು ಪಾವತಿಸಿ ಅರ್ಜಿ ಸಲ್ಲಿಸಬಹುದು.
ಜಾನುವಾರು ಸಾಗಾಟ ಪರವಾನಿಗೆ ಗೆ ಅರ್ಜಿ ಸಲ್ಲಿಸಲು ಅಗತ್ಯವಿರುವ ದಾಖಲಾತಿಗಳು
ವಾಹನ ಸಂಖ್ಯೆ ಮತ್ತು ಮಾಡೆಲ್, ವಾಹನದ ಮಾಲೀಕನ ಹೆಸರು ವಿಳಾಸ ಮತ್ತು ಮೊಬೈಲ್ ಸಂಖ್ಯೆ, ವಾಹನದ ಚಾಲಕನ ಹೆಸರು ವಿಳಾಸ ಮತ್ತು ಲೈಸೆನ್ಸ್ ಸಂಖ್ಯೆ, ವಾಹನದ ಫೋಟೋ (ಫೋಟೋದ ಗಾತ್ರ 512 kb ಗಿಂತ ಕಡಿಮೆ ಇರಬೇಕು), ವಾಹನದ ಆರ್ ಸಿ ಫೋಟೋ (ಫೋಟೋದ ಗಾತ್ರ 512 kb ಗಿಂತ ಕಡಿಮೆ ಇರಬೇಕು), ಜಾನುವಾರು ಮಾರಾಟಗಾರನ ಹೆಸರು ವಿಳಾಸ ವಿವರ ಮತ್ತು ಮೊಬೈಲ್ ಸಂಖ್ಯೆ, ಜಾನುವಾರು ಮಾರಾಟಗಾರರ ಐಡಿ ಕಾರ್ಡ್ ಫೋಟೋ (ಫೋಟೋದ ಗಾತ್ರ 512 kb ಗಿಂತ ಕಡಿಮೆ ಇರಬೇಕು), ಜಾನುವಾರುವಿನ ಫೋಟೋ (ಫೋಟೋದ ಗಾತ್ರ 512 kb ಗಿಂತ ಕಡಿಮೆ ಇರಬೇಕು), ಜಾನುವಾರಿನ ಕಿವಿ ಓಲೆ ಸಂಖ್ಯೆ ಮತ್ತು ಲಸಿಕ ವಿವರ, ಜಾನುವಾರು ಖರೀದಿಸುವವರ ಹೆಸರು ಮತ್ತು ವಿಳಾಸ, ಸಾಗಾಣಿಕೆ ಮಾಡುವ ದಿನಾಂಕ ಸಾಗಾಟದ ಅವಧಿ ಮತ್ತು ಮಾರ್ಗ
ಇಷ್ಟು ವಿವರಗಳೊಂದಿಗೆ “ಗ್ರಾಮ ಒನ್” (GRAMA ONE) ಅಥವಾ “ಸಾಮಾನ್ಯ ಸೇವಾ ಕೇಂದ್ರ” (COMMON SERVICE CENTER) ಗಳಿಗೆ ಭೇಟಿ ನೀಡಿ ತಮ್ಮ ಅರ್ಜಿಗಳನ್ನು ಮೇಲೆ ತಿಳಿಸಿದ ಜಾಲತಾಣದಲ್ಲಿ ರೈತರು ಅಥವಾ ವಾಹನದ ಚಾಲಕರು ತಾವೇ ಅರ್ಜಿ ಸಲ್ಲಿಸಬೇಕಾಗಿದೆ.
ಎಲ್ಲಾ ದಾಖಲಾತಿಗಳನ್ನು ಹೊಂದಿದ ಅರ್ಜಿಗಳನ್ನು ಜಾನುವಾರುವಿನ ಪರಿಶೀಲನೆಯ (ಪಶುವೈದ್ಯರಿಂದ ಜಾನುವಾರು ಪರಿಶೀಲನೆ ಕಡ್ಡಾಯ) ನಂತರ ಮಾನ್ಯ (Approve) ಮಾಡಿ ಪರವಾನಗಿಯನ್ನು ಆಯಾ ಸಂಸ್ಥೆಗಳಲ್ಲಿ ಹೊರಡಿಸಲಾಗುವುದು ಎಂದು
ಪ್ರಕಟಣೆಯಲ್ಲಿ ತಿಳಿಸಿದ್ದಾರೆ.